ಮಣಿಪಾಲ: ಕಾರಂಜಿಯಂತೆ ಗಗನದೆತ್ತರಕ್ಕೆ ಚಿಮ್ಮಿದ ನೀರು

Share with

ಉಡುಪಿ: ಮಣಿಪಾಲ ಈಶ್ವರನಗರದ ಕೆಳಪರ್ಕಳದಲ್ಲಿರುವ ನಗರಸಭೆಯ ಕುಡಿಯುವ ನೀರು ಸರಬರಾಜು ಮಾಡುವ ರೇಚಕ ಒಡೆದು ಕಾರಂಜಿಯಂತೆ ಗಗನದೆತ್ತರಕ್ಕೆ ರಭಸವಾಗಿ ನೀರು ಚಿಮ್ಮುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಆಕಸ್ಮಿಕವಾಗಿ ನೀರು ಸರಬರಾಜು ಮಾಡುವ ರೇಚಕ ಒಡೆದಿದ್ದು, ಇದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗಿದೆ. ನಗರಸಭಾ ವ್ಯಾಪ್ತಿಯಲ್ಲಿ ನೀರಿಗೆ ಅಭಾವವಿದ್ದು, ಇದೇ ವೇಳೆ ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅವೈಜ್ಞಾನಿಕ ಜೋಡಣೆ ಮಾಡಿರುವುದರಿಂದ ರೇಚಕ ಒಡೆದು ನೀರು ಪೋಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ಸತೀಶ್ ಶೆಟ್ಟಿ ಕೆಳಪರ್ಕಳ ದೂರಿದ್ದಾರೆ. ಸಂಬಂಧಪಟ್ಟ ನಗರಸಭೆ ಅಧಿಕಾರಿಗಳಿಗೆ ವಿಷಯ ತಿಳಿಸಿ, ಕೂಡಲೇ ದುರಸ್ತಿ ಮಾಡುವಂತೆ ಆಗ್ರಹಿಸಿದ್ದಾರೆ


Share with

Leave a Reply

Your email address will not be published. Required fields are marked *