ಬೆಂಗಳೂರಿನ ಬನಶಂಕರಿ ಡಿಪೋದ ಬಿಎಂಟಿಸಿ ಬಸ್‌ನಲ್ಲಿ ಶಕ್ತಿ ಯೋಜನೆಯಡಿ ದಾಖಲೆಗಳನ್ನು ತೋರಿಸದೇ ಉಚಿತ ಟಿಕೆಟ್‌ಗಾಗಿ ಟೆಕ್ಕಿ ಯುವತಿ ರಂಪಾಟ ಮಾಡಿದ ವೀಡಿಯೋ ವೈರಲ್ ಆಗುತ್ತಿದೆ.
ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದ ಮೂಲಕ ಜಾರಿಗೊಂಡಿದ್ದ ಶಕ್ತಿ ಯೋಜನೆಯ (ಕರ್ನಾಟಕದ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ) ಅಡಿಯಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಸೂಕ್ತ ದಾಖಲೆಗಳನ್ನು ತೋರಿಸದೇ ಉಚಿತ ಟಿಕೆಟ್‌ಗಾಗಿ ಟೆಕ್ಕಿ ಯುವತಿ, ಬಸ್ ಕಂಡಕ್ಟರ್‌ಗೆ ಅವಾಜ್ ಹಾಕಿದ್ದಾಳೆ.
ಬೆಂಗಳೂರಿನ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣದ ವೇಳೆ ಟೆಕ್ಕಿ ಯುವತಿಯೊಬ್ಬರು ರಂಪಾಟ ಮಾಡಿದ್ದಾಳೆ. ಶಕ್ತಿ ಯೋಜನೆ ಅಡಿಯಲ್ಲಿ ದಾಖಲೆ ತೋರಿಸುವುದೂ ಇಲ್ಲ, ಕಾಸು ಕೊಟ್ಟು ಟಿಕೆಟ್ ತೆಗೆದುಕೊಳ್ಳುವುದಿಲ್ಲವೆಂದು ಬಸ್‌ನಲ್ಲಿ ಕಂಡಕ್ಟರ್ ಜೊತೆಗೆ ಕಿರಿಕ್ ಮಾಡಿದ್ದಾಳೆ. ಇಷ್ಟಕ್ಕೇ ಸುಮ್ಮನಾಗಲಿಲ್ಲ ಯುವತಿ, ನಾನು ಸೆಂಟ್ರಲ್ ಗವರ್ನಮೆಂಟ್ ಸಿಬ್ಬಂದಿ, ನಾನು ದುಡ್ಡು ಕೊಡಲ್ಲ. ಏನ್ ಮಾಡ್ಕೊತಿಯೋ ಮಾಡ್ಕೊ ಎಂದು ಕಂಡಕ್ಟರ್ ಗೆ ಅವಾಜ್ ಹಾಕಿದ್ದಾಳೆ. ನೀವು ಕೇಂದ್ರ ಸರ್ಕಾರದ ಉದ್ಯೋಗಿ ಎಂಬುದಕ್ಕೆ ಗುರುತಿನ ಚೀಟಿ (Identity card) ತೋರಿಸಿ ಎಂದ್ರೂ ಕೇಳದ ಯುವತಿ ಸುಖಾಸುಮ್ಮನೆ ರಂಪಾಟ ಮಾಡಿದ್ದಾಳೆ.