ಕಾರಿಗೆ ಟೆಂಪೋ ಡಿಕ್ಕಿ: ಟೆಂಪೋ ಚಾಲಕನ ಮೇಲೆ ಹಲ್ಲೆ

Share with

ಉಜಿರೆ ಮೀನು ಮಾರುಕಟ್ಟೆಯಲ್ಲಿ ಮೀನು ತರುವ ಟೆಂಪೋ ಕಾರಿಗೆ ಡಿಕ್ಕಿ.

ಬೆಳ್ತಂಗಡಿ: ಉಜಿರೆ ಮೀನು ಮಾರುಕಟ್ಟೆಯಲ್ಲಿ ಮೀನು ತರುವ ಟೆಂಪೋ ಕಾರಿಗೆ ಡಿಕ್ಕಿ ಹೊಡೆದ ಕಾರಣಕ್ಕೆ ಟೆಂಪೋ ಚಾಲಕನ ಮೇಲೆ ಸ್ಥಳೀಯರ ತಂಡ ಹಲ್ಲೆ ನಡೆಸಿರುವುದಾಗಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಹಲ್ಲೆಗೆ ಒಳಗಾದ ವ್ಯಕ್ತಿ ಟೆಂಪೋ ಚಾಲಕ ಕುವೆಟ್ಟು ಗ್ರಾಮದ ಚಿಲಿಂಬಿ ನಿವಾಸಿ ಶೌಕತ್ ಆಲಿ(24)ಎಂದು ಗುರುತಿಸಲಾಗಿದೆ.

ಹಲ್ಲೆಯ ಹಿನ್ನೆಲೆಯಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಶೌಕತ್ ಅಲಿ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ, ನಾನು ಟೆಂಪೊವನ್ನು ಹಿಂದಕ್ಕೆ ತಗೆಯುತ್ತಿದ್ದಾಗ ಆಕಸ್ಮಿಕವಾಗಿ ಕಾರಿಗೆ ತಾಗಿದ್ದು ಇದನ್ನು ಪ್ರಶ್ನಿಸಿ ಪರಿಚಯದವರಾದ ನಾಗೇಶ, ಪ್ರವೀಣ, ಹರಿ, ವಿನಯ ಹಾಗೂ ಇತರರು ಸೇರಿ ನನಗೆ ತೀವ್ರವಾಗಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಘಟನೆಯ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ಘಟನೆಗೆ ಸಂಬಂಧಿಸಿದಂತೆ ಪ್ರತಿದೂರು ನೀಡಿರುವ ನ್ಯಾಯತರ್ಪು ಗ್ರಾಮದ ನಿವಾಸಿ, ಉಜಿರೆ ಮೀನು ಮಾರುಕಟ್ಟೆಯಲ್ಲಿ ಮೀನು ಕ್ಲೀನಿಂಗ್ ಕೆಲಸ ಮಾಡುವ ಗಿರಿಜಾ ಎಂಬವರು, ಮೀನು ಸಾಗಾಟದ ಟೆಂಪೋ ಚಾಲಕ ಕಾರಿಗೆ ಟೆಂಪೋವನ್ನು ತಾಗಿಸಿ ಜಂಖಂಗೊಳಿಸಿದ್ದು ಬಳಿಕ ಗಲಾಟೆ ಮಾಡಿದ್ದು ಮೀನು ಮಾರುಕಟ್ಟೆಗೆ ನುಗ್ಗಿ ಕತ್ತಿಯನ್ನು ತೆಗೆಯಲು ಪ್ರಯತ್ನಿಸಿದ್ದನ್ನು ವಿರೋಧಿಸಿದಾಗ ಆರೋಪಿ ಚಾಲಕ ನನ್ನನ್ನು ನಿಂದಿಸಿ ಹಲ್ಲೆ ನಡೆಸಿ ನನ್ನ ತಲೆ ಹಿಡಿದು ಗೋಡೆಗೆ ದೂಡಿ ಗಾಯ ಗೊಳಿಸಿರುವುದಾಗಿ ದೂರಿದ್ದಾರೆ. ಬಗ್ಗೆಯೂ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


Share with

Leave a Reply

Your email address will not be published. Required fields are marked *