ಪ್ರತಿಭಾವಂತ ಹಿರಿಯ ಬರಹಗಾರ್ತಿ ಡಾ|ಕಮಲಾ ಹೆಮ್ಮಿಗೆ ವಿಧಿವಶರಾಗಿದ್ದಾರೆ.ಇವರು ಪಲ್ಲವಿ, ವಿಷಕನ್ಯೆ, ಮುಂಜಾನೆ ಬಂದವನು ಸೇರಿದಂತೆ ಹಲವು ಪುಸ್ತಕ ಬರೆದಿದ್ದಾರೆ.
ಮೈಸೂರು ಜಿಲ್ಲೆಯ ಹೆಮ್ಮಿಗೆಯಲ್ಲಿ 1952 ನ.20ರಂದು ಜನಿಸಿದ್ದ ಅವರು ಮೈಸೂರು ವಿವಿಯಿಂದ ಎಂ.ಎ. ಪದವಿ, ಕರ್ನಾಟಕ ವಿವಿಯಿಂದ ಪಿಹೆಚ್ಡಿ ಪಡೆದಿದ್ದಾರೆ. ಆಕಾಶವಾಣಿಯ ಧಾರವಾಡ ಮತ್ತು ಮಂಗಳೂರು, ದೂರದರ್ಶನದ ಬೆಂಗಳೂರು ಮತ್ತು ತಿರುವನಂತಪುರದಲ್ಲಿ ಕಾರ್ಯನಿರ್ವಹಿಸಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ.