40 ಅಡಿ ಆಳದ ನದಿಗೆ ಬಿದ್ದ ಬೈಕ್ ಸವಾರನನ್ನು ಕಾಪಾಡಿದ ಯುವಕರು

Share with

ಬೈಕ್ ಸೇತುವೆಗೆ ಡಿಕ್ಕಿ ಹೊಡೆದು ಬೈಕ್ ಸವಾರ 40 ಅಡಿ ಆಳದ ನದಿಗೆ ಬಿದ್ದಿದೆ.

ವಿಟ್ಲ: ಬೈಕ್ ಸೇತುವೆಗೆ ಡಿಕ್ಕಿ ಹೊಡೆದು ಬೈಕ್ ಸವಾರ 40 ಅಡಿ ಆಳದ ನದಿಗೆ ಬಿದ್ದಿರುವ ಘಟನೆ ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿಯಲ್ಲಿ ನಡೆದಿದೆ. ಹರ್ಷವರ್ಧನ ಭಟ್‌ ಎಂಬುವವರು ತಮ್ಮ ಬೈಕಿನಲ್ಲಿ ವಿಟ್ಲದತ್ತ ತಮ್ಮ ಕೆಲಸಕ್ಕೆಂದು ಶನಿವಾರ ಬೆಳಿಗ್ಗೆ ನಾಲ್ಕು ಗಂಟೆಗೆ ಬೈಕಿನಲ್ಲಿ ಹೊರಟಿದ್ದರು. ಈ ಸಂದರ್ಭದಲ್ಲಿ ವಿಟ್ಲ-ಸಾಲೆತ್ತೂರು ರಸ್ತೆಯ ಕೊಡಂಗಾಯಿ ಸೇತುವೆಯ ತಡೆಗೋಡೆಗೆ ಬೈಕ್‌ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಹರ್ಷವರ್ಧನ ಅವರು 40 ಅಡಿ ಆಳದ ನದಿಗೆ ಬಿದ್ದಿದ್ದಾರೆ.

ಕೂಡಲೇ ಅಲ್ಲಿದ್ದ ಸ್ಥಳೀಯರು ಅಪಘಾತ ಸಂಭವಿಸಿದ್ದನ್ನು ಗಮನಿಸಿ, ಸವಾರನನ್ನು ಹುಡುಕಲು ಪ್ರಾರಂಭಿಸಿದ್ದು, ನಂತರ ಅವರಿಗೆ ಹೊಳೆ ಮಧ್ಯೆ ಓರ್ವ ವ್ಯಕ್ತಿ ಜೋರಾಗಿ ಕೂಗಾಡುತ್ತಿರುವ ಶಬ್ದ ಕೇಳಿಸಿದ್ದು, ತಕ್ಷಣ ನದಿಗೆ ಯುವಕರು ಹಾರಿ ಆ ವ್ಯಕ್ತಿಯನ್ನು ಮೇಲಕ್ಕೆತ್ತಿ ಜೀವವನ್ನು ಉಳಿಸಿದ್ದಾರೆ.

ನಂತರ ಮುಸಲ್ಮಾನ ಬಾಂಧವ ಯುವಕರು ಗಾಯಾಳುವನ್ನು ಉಪಚರಿಸಿದ್ದು, ಆಟೋ ಮೂಲಕ ಮನೆಗೆ ತಲುಪಿಸಿ ಮಾನವೀಯತೆಯನ್ನು ಮರೆದಿದ್ದಾರೆ. ಗಾಯಾಳು ಹರ್ಷವರ್ಧನ ಅವರ ಮನೆಯವರು ಯುವಕರ ಕೆಲಸಕ್ಕೆ ಮನಃಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.


Share with

Leave a Reply

Your email address will not be published. Required fields are marked *