ಕಾಂತಾರ ಚಾಪ್ಟರ್-1 ರ ಸಿನಿಮಾ ಸೆಟ್‌ನಲ್ಲಿ ಮತ್ತೆ ಅವಘಡ ಸಂಭವಿಸಿದೆ. ಈಗಾಗಲೇ ಚಿತ್ರತಂಡ ಮೂವರು ಕಲಾವಿದರನ್ನು ಕಳೆದುಕೊಂಡಿದೆ. ಇದರ ಬೆನ್ನಲ್ಲೆ ನಿನ್ನೆ ರಾತ್ರಿ ಚಿತ್ರದ ನಾಯಕ ರಿಷಬ್ ಶೆಟ್ಟಿ ಸೇರಿದಂತೆ 30 ಕಲಾವಿದರಿದ್ದ ಬೋಟ್ ಒಂದು ಮಗುಚಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ಬೋಟು ಮಗುಚಿದೆ. ಬೋಟ್‌ನಲ್ಲಿದ್ದ ಕಲಾವಿದರು, ತಂತ್ರಜ್ಞರೆಲ್ಲರೂ ಈಜಿಕೊಂಡು ದಡಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.