ಕಾಡು ಹಂದಿಗೆ ನಿರ್ಮಿಸಿದ್ದ ವಿದ್ಯುತ್​ ಬಲೆಗೆ ಇಬ್ಬರು ಯುವಕರು ಬಲಿ; ಶವ ಅಡಗಿಸಿಟ್ಟ ಜಮೀನಿನ ಮಾಲೀಕ!

Share with

ಕಾಡು ಹಂದಿಗಳಿಗಾಗಿ ಇಟ್ಟಿದ್ದ ವಿದ್ಯುತ್ ಬಲೆಯನ್ನು ತುಳಿದು ಇಬ್ಬರು ಯುವಕರು ಮೃತ್ಯು.

ಪಾಲಕ್ಕಾಡ್: ಕಾಡು ಹಂದಿಗಳಿಗಾಗಿ ಇಟ್ಟಿದ್ದ ವಿದ್ಯುತ್ ಬಲೆಯನ್ನು ತುಳಿದು ಇಬ್ಬರು ಯುವಕರು ಮೃತಪಟ್ಟಿದ್ದು, ಇದರಿಂದ ಆತಂಕಗೊಂಡಿರುವ ಜಮೀನಿನ ಮಾಲಕ, ಆ ಯುವಕರ ದೇಹಗಳನ್ನು ತನ್ನ ಜಮೀನಿನಲ್ಲೇ ಹೂತ ಹಾಕಿದ ಘಟನೆ ಕೇರಳದಲ್ಲಿ ನಡೆದಿದೆ.

ಮಂಗಳವಾರ ಕೊಡುಂಬುವಿನ ಅಂಬಲಪರಂಬು ಗ್ರಾಮದ ಪಲ್ನೀರಿ ಕಾಲನಿಯಲ್ಲಿ ಇಬ್ಬರು ಯುವಕರ ದೇಹದ ಭಾಗಗಳು ಜಮೀನೊಂದರಲ್ಲಿ ಪತ್ತೆಯಾಗಿದ್ದವು. ಈ ಕುರಿತು ಜಮೀನಿನ ಮಾಲಕನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.

ಗಾಬರಿಯಿಂದ ತಾನು ಹಾಗೆ ಮಾಡಿದೆ ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಮೃತ ಯುವಕರ ದೇಹಗಳು ಪತ್ತೆಯಾದ ಜಮೀನಿನ ಮಾಲಕ ಅಂಬಲಪರಂಬು ವೀಟ್ಟಿಲ್ ಅನಂತನ್ (52) ಇದೀಗ ಪೊಲೀಸರ ವಶದಲ್ಲಿದ್ದಾನೆ. ಆ ಯುವಕರ ಸಾವಿಗೆ ಮತ್ತೇನಾದರೂ ಕಾರಣವಿತ್ತೆ ಎಂಬ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Share with

Leave a Reply

Your email address will not be published. Required fields are marked *