ವೀಕ್ಷಕವಾಣಿ: ನಟಿ ಉರ್ಫಿ ಜಾವೇದ್.. ಇವರು ಹಿಂದಿಯ ಬಿಗ್ ಬಾಸ್ ಒಟಿಟಿಯಲ್ಲಿ ಸ್ಪರ್ಧಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರು. ಇದಕ್ಕಿಂತ ಹೆಚ್ಚು ಅವರು ತನ್ನ ವಿಚಿತ್ರವಾದ ಉಡುಗೆ ತೊಡುಗೆಗಳಿಂದ ಸಖತ್ ಫೇಮಸ್ ಆಗಿದ್ದಾರೆ. ಕೆಲವೊಂದಷ್ಟು ಜನರಿಂದ ಮೆಚ್ಚುಗೆಯನ್ನು ಪಡೆದಿದ್ದು, ಕೆಲವರಿದ ಟೀಕಿಗೆ ಒಳಪಟ್ಟಿದ್ದಾರೆ.
ಇದೀಗ ದೇಶದಲ್ಲೇ ಭಾರೀ ದುಬಾರಿಯಾಗಿರುವ ಟೊಮೆಟೋವನ್ನು ತನ್ನ ಆಭರಣವಾಗಿ ಧರಿಸಿಕೊಂಡಿದ್ದಾರೆ. ಕೆ.ಜಿ ಗೆ 10-20 ರೂ. ಇದ್ದ ಟೊಮೆಟೋ ಬೆಲೆ ಇತ್ತೇಚೆಗೆ ಕೈಗೆಟಕಲಾರದಷ್ಟು ದುಬಾರಿಯಾಗಿದೆ. 10-20 ರೂ. ಯಿಂದ 120 ರೂ. ಗಟಿ ದಾಟಿದೆ. ಈ ಕುರಿತು ದೇಶದಲ್ಲೆ ವ್ಯಾಪಕ ಚರ್ಚೆಯಾಗುತ್ತಿದ್ದು, ಈ ಮಧ್ಯೆ ಉರ್ಫಿ ಜಾವದ್ ರವರು ಟೊಮೆಟೋವನ್ನು ತನ್ನ ಕಿವಿಯೋಲೆಯಾಗಿ ಮಾಡಿಕೊಂಡ ಫೊಟೋವನ್ನು ಸಾಮಾಜಿಕ ಜಾಲತಾಣವೊಂದರಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.