ಕೂಡ್ಲು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಹಿಳಾ ಸಮಿತಿಯ ಆಶ್ರಯದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ವ್ರತಾಚರಣೆ ವಿಜೃಂಭಣೆಯಿಂದ ಜರಗಿತು. ಪೌರೋಹಿತ್ಯ ದಲ್ಲಿ ಶ್ರೀ ಮಧು ಕೇಕುಣ್ಣಾಯ ಅವರೊಂದಿಗೆ ಅವಿನಾಶ್ ಭಟ್ ಹಾಗೂ ಲಕ್ಷ್ಮೀ ನಾರಾಯಣ ಮನೋಳಿತ್ತಾಯರು ಸಹಕಾರವಿತ್ತರು.
ದೇವಸ್ಥಾನದ ಅನುವಂಶಿಕ ಮೊಕ್ತೆಸರರು ಶ್ರೀ ಸುಧಾಕರ ಕೋಟೆಕುಂಜಾತ್ತಾಯರ ದಿವ್ಯ ಉಪಸ್ಥಿತಿಯಲ್ಲಿ ಮಹಿಳಾ ಸಮಿತಿಯ ಲೀಲಾವತಿ ಭಂಡಾರಿ, ಬಿಂದು ಜಗದೀಶ್, ಶಕೀಲಾ, ಬೇಬಿನಾಯ್ಕ್, ಶೋಭಾ, ಶುಭಾಷಿಣಿ, ಜಯಂತಿ, ಚಂಪಾ, ಕಲಾವತಿ ಮೊದಲಾದವರು ಪೂಜೆಯ ನೇತೃತ್ವ ವಹಿಸಿದರು. ಪೂಜೆಯ ಬಳಿಕ ಅನ್ನ ಸಂತರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.