ಉಪ್ಪಳ: ವಿಭಿನ್ನ ಕಥೆಗಳನ್ನು ಬರೆಯುವುದರಲ್ಲಿ ಸೈ ಎನಿಸಿರುವ ತುಕರಾಮ ಬಾಯಾರು ನಿರ್ದೇಶನದಲ್ಲಿ ಮೂಡಿಬರಲಿರುವ “ಸಿಲಿಕಾನ್ ಸಿಟಿ” ಕನ್ನಡ ಕಿರುಚಿತ್ರದ ಸನ್ನಿವೇಶವೊಂದರಲ್ಲಿ ಖ್ಯಾತ ಉದ್ಯಮಿ ಹಾಗೂ ಕೊಡುಗೈ ದಾನಿಯೂ ಆಗಿರುವ ವಸಂತ ಪೈ ಬದಿಯಡ್ಕ ಕಾಸರಗೋಡು ಇವರು ಅಭಿನಯಿಸಿದ್ದಾರೆ.
ಈ ಚಿತ್ರದ ಕಥೆಯನ್ನು ಮೆಚ್ಚಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ ಎನ್ನುವುದು ವಿಶೇಷ. ಹಲವಾರು ವಿಶೇಷತೆಗಳನ್ನು ಹೊಂದಿರುವ ಈ ಕಿರುಚಿತ್ರದ ನಿರೀಕ್ಷೆಯಲ್ಲಿ ಅಪಾರ ಮಂದಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಪ್ರೇಕ್ಷಕರನ್ನು ರಂಜಿಸಲು ಚಿತ್ರತಂಡ ಕಾರ್ಯಮಗ್ನವಾಗಿದೆ.