ಬೆಂಗಳೂರು: ಸ್ಯಾಂಡಲ್ ವುಡ್ ಚಲನಚಿತ್ರ ನಟ ವಿಜಯರಾಘವೇಂದ್ರರವರ ಪತ್ನಿ ಸ್ಪಂದನ ರವರು ವಿದೇಶ ಪ್ರಯಾಣದಲ್ಲಿರುವಾಗ ಹೃದಯಾಘಾತ ಸಂಭವಿಸಿ ನಿಧನ ಹೊಂದಿದ್ದಾರೆ.
ಬೆಳ್ತಂಗಡಿ ನಿವೃತ್ತ ಪೊಲೀಸ್ ಬಿಕೆ ಶಿವರಾಂ ರವರ ಪುತ್ರಿ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಬೆಳ್ತಂಗಡಿಯಿಂದ ಇವರ ಸಹೋದರ ರಕ್ಷಿತ್ ಶಿವರಾಂ ಚುನಾವಣೆಗೆ ಸ್ಪರ್ಧಿಸಿದ್ದರು. ಇದೀಗ ಸ್ಪಂದನ ರವರ ಅಗಲಿಕೆಯಿಂದ ಇಡೀ ಕುಟುಂಬ ಸೇರಿದಂತೆ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.