ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಪಾರ್ಥಿವ ಶರೀರವನ್ನು ನಾಳೆ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ತರಲಾಗುತ್ತದೆ. ಮಲ್ಲೇಶ್ವರಂನ ಬಿ.ಕೆ.ಶಿವರಾಂ ನಿವಾಸದಲ್ಲಿ ಪಾರ್ಥಿವ ಶರೀರ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗುತ್ತಿದೆ. ತಂದೆ ಶಿವರಾಂ ಮನೆಯ ಮುಂದೆ ಶಾಮಿಯಾನ ಹಾಕಲಾಗುತ್ತದೆ.
ಚಿತ್ರರಂಗ ಸೇರಿದಂತೆ ರಾಜಕೀಯ ನಾಯಕರೊಂದಿಗೆ ವಿಜಯ್ ಕುಟುಂಬ ಉತ್ತಮ ಸಂಬಂಧವನ್ನು ಹೊಂದಿರುವ ಕಾರಣ, ನಾಳೆ ಸಂಜೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ.