ಟೊಮ್ಯಾಟೊ ಹಣ್ಣಿಗಾಗಿ ಕಾವಲುಗಾರನಿಗೆ ಚಾಕು ಇರಿದು ಹಲ್ಲೆ!

Share with

ವೀಕ್ಷಕವಾಣಿ: ಟೊಮ್ಯಾಟೊಗಾಗಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ರಾಯಚೂರಿನ ಮಾನ್ವಿ ಪಟ್ಟಣದ ಮಾರ್ಕೆಟ್‌ನಲ್ಲಿ ನಡೆದಿದೆ. ಮಾನ್ವಿ ಪುರಸಭೆ ಮಳಿಗೆಯ ತರಕಾರಿ ಮಾರ್ಕೆಟ್‌ನಲ್ಲಿ ಕಾವಲಿಗಾಗಿ ನಿಂತಿದ್ದ ರಫಿ ಎಂಬವರು ತಳ್ಳುವ ಗಾಡಿಯಲ್ಲಿ ಮಲಗಿದ್ದರು. ಈ ವೇಳೆ ದುಷ್ಕರ್ಮಿಯೊಬ್ಬ ರಫಿ ಜೊತೆ ಮಾತನಾಡುವ ಸಲುವಾಗಿ ತಡರಾತ್ರಿ ವೇಳೆ ಬಂದು ರಫಿಯವರ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ಎಸ್ಕೇಪ್‌ ಆಗಿದ್ದಾನೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಯಾಳು ಸಮೀಪದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಟೊಮ್ಯಾಟೊ ಕಳ್ಳತನಕ್ಕಾಗಿ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದ್ದು, ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಟೊಮ್ಯಾಟೊಗೆ ಚಿನ್ನದ ಬೆಲೆ ಬಂದಿರುವುದರಿಂದ ಕ‍ಳ್ಳರ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆ ರೈತರು ರಾತ್ರಿಯಿಡೀ ಟೊಮ್ಯಾಟೊ ಬೆಲೆಯನ್ನು ಕಾಯುವಂತಾಗಿದೆ.


Share with