ದಿನವಿಡೀ ಮೊಬೈಲ್‌ ಗೇಮ್‌ಗೆ ಅಡಿಕ್ಟ್‌ ಆದ ಬಾಲಕ; ನಿದ್ದೆಯಲ್ಲೂ”ಫೈಯರ್‌ ಫೈಯರ್”‌ ಕಿರುಚಾಟ! ಹದಗೆಟ್ಟ ಬಾಲಕನ ಆರೋಗ್ಯ

Share with

ವೀಕ್ಷಕವಾಣಿ: ರಾಜಸ್ಥಾನದ ಆಳ್ವಾರ್ ನಲ್ಲಿ 15 ವರ್ಷದ ಬಾಲಕನೊಬ್ಬ ದಿನದ 15 ಗಂಟೆಗಳ ಕಾಲ ಮೊಬೈಲ್‌ ಗೇಮ್ ಆಡಿ ಇದೀಗ ನಿದ್ದೆಯಲ್ಲೂ ಆತನ ಕೈ, ಬಾಯಿ ಗೇಮ್‌ ನ ವಿಧಾನವನ್ನೇ ಅನುಸರಿಸುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಬಾಲಕನ ತಾಯಿ ಮನೆ ಕೆಲಸದವರಾಗಿದ್ದು, ತಂದೆ ರಿಕ್ಷಾ ಚಾಲಕರಾಗಿದ್ದಾರೆ. ಕಳೆದ 6 ತಿಂಗಳಿನಿಂದ ಬಾಲಕ ದಿನಕ್ಕೆ 15 ಗಂಟೆ ಫ್ರೀ ಫೈಯರ್‌‌ ಹಾಗೂ ಬ್ಯಾಟಲ್‌ ರಾಯಲ್ ಗೇಮ್‌ ನ್ನು ಆಡುತ್ತಿದ್ದ. 7ನೇ ತರಗತಿಯಲ್ಲಿ ಓದುತ್ತಿರುವ ಈ ಹುಡುಗ ವಿಪರೀತ ಗೇಮ್‌ ಚಟದಿಂದಾಗಿ ಆಹಾರವನ್ನೇ ಮರೆತಿದ್ದಾನೆ. ನಿರಂತರ ಫ್ರೀ ಗೇಮ್‌ ಆಡುತ್ತಿದ್ದ ಬಾಲಕನ ಮಾನಸಿಕ ಆರೋಗ್ಯ ಹದಗೆಡಲು ಶುರುವಾಗಿದೆ. ನಿದ್ದೆ ಮಾಡುತ್ತಿದ್ದ ವೇಳೆ “ಫಯರ್, ಫಯರ್”‌ ಎಂದು ಕಿರುಚಾಡಿ, ಕೈಗಳಲ್ಲಿ ಗೇಮ್‌ ಆಡುವ ವಿಧಾನವನ್ನು ಮಾಡುತ್ತಿದ್ದ. ಎರಡು ತಿಂಗಳು ಪೋಷಕರು ಬಾಲಕನನ್ನು ಮೊಬೈಲ್‌ ನಿಂದ ದೂರವಿಡಲು ಯತ್ನಿಸಿದರೂ, ಬಾಲಕನ ಚಲನವಲನ ಗೇಮ್ ವಿಧಾನವನ್ನೇ ಅನುಸರಿಸಿದೆ. ಇದರಿಂದ ಮತ್ತಷ್ಟು ಗಾಬರಿಗೊಂಡ ಪೋಷಕರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಾಲಕನನ್ನು ಸದ್ಯ ವಿಶೇಷ ಚೇತನರ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಸ್ವಲ್ಪ ಚೇತರಿಕೆಯಾಗಿದ್ದಾನೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *