Mutual Fund : ಮ್ಯೂಚುವಲ್‌ ಫಂಡ್‌ ಎಂದರೇನು? ಎಷ್ಟೆಲ್ಲ ವಿಧದಲ್ಲಿ ಹೂಡಿಕೆ ಮಾಡಬಹುದು…?

Share with

ಮ್ಯೂಚುಯಲ್ ಫಂಡ್‌ಗಳು ಕಡಿಮೆ ರಿಸ್ಕ್‌ ಹಾಗೂ ಉತ್ತಮ ಆದಾಯ ನೀಡುವ ಹೂಡಿಕೆಯ ಸಾಧನಗಳಾಗಿವೆ. ಹೆಚ್ಚಿನ ಸಂಖ್ಯೆಯ ಹೂಡಿಕೆದಾರರು ಮ್ಯೂಚುವಲ್ ಫಂಡ್‌ಗಳತ್ತ ಆಕರ್ಷಿತರಾಗಲು ಇದೇ ಕಾರಣ. ಮ್ಯೂಚುವಲ್ ಫಂಡ್‌ಗಳ ಮೂಲಕ, ನಿಮ್ಮ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಸಾಲ, ಚಿನ್ನ ಮತ್ತು ಸರಕುಗಳಲ್ಲಿಯೂ ಹೂಡಿಕೆ ಮಾಡಬಹುದು.

ಕಡಿಮೆ ರಿಸ್ಕ್‌ ಹಾಗೂ ಉತ್ತಮ ಆದಾಯ ನೀಡುವ ಹೂಡಿಕೆಯ ಸಾಧನಗಳಿಗಾಗಿ ನೋಡುತ್ತಿದ್ದರೆ, ನಿಮಗೆ ಮ್ಯೂಚುಯಲ್ ಫಂಡ್‌ಗಳು ಉತ್ತಮ ಆಯ್ಕೆಯಾಗಿದೆ. ಪ್ರಸ್ತುತ, ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲ ಹೂಡಿಕೆಯ ಅವಕಾಶಗಳಲ್ಲಿ, ಮ್ಯೂಚುವಲ್ ಫಂಡ್‌ಗಳು ಉತ್ತಮ ಮತ್ತು ಸುಸ್ಥಿರ ಆದಾಯ ನೀಡುತ್ತಿವೆ. ಹೆಚ್ಚಿನ ಸಂಖ್ಯೆಯ ಹೂಡಿಕೆದಾರರು ಮ್ಯೂಚುವಲ್ ಫಂಡ್‌ಗಳತ್ತ ಆಕರ್ಷಿತರಾಗಲು ಇದೇ ಕಾರಣ. ಅದರಲ್ಲೂ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ಇದರಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಏಕೆಂದರೆ ಷೇರು ಮಾರುಕಟ್ಟೆಯ ಬಗ್ಗೆ ಕಡಿಮೆ ಜ್ಞಾನ ಹೊಂದಿರುವವರಿಗೆ ಮ್ಯೂಚುವಲ್ ಫಂಡ್ ಸುರಕ್ಷಿತ ಆಯ್ಕೆಯಾಗಿದೆ.

ಮ್ಯೂಚುವಲ್ ಫಂಡ್‌ಗಳ ಮೂಲಕ, ನಿಮ್ಮ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಸಾಲ, ಚಿನ್ನ ಮತ್ತು ಸರಕುಗಳಲ್ಲಿಯೂ ಹೂಡಿಕೆ ಮಾಡಬಹುದು. ಮಾರುಕಟ್ಟೆಯಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಹಲವು ಆಯ್ಕೆಗಳಿವೆ. ಆದರೆ, ತಜ್ಞರ ಸಲಹೆ ಪಡೆದು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಏಕೆಂದರೆ ಸರಿಯಾದ ಮಾಹಿತಿ ಇಲ್ಲದೆ ಹೂಡಿಕೆ ಮಾಡಿದರೆ, ನಿರೀಕ್ಷಿತ ಫಲಿತಾಂಶ ಸಿಗದೇ ಇರಬಹದು.

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಹಲವು ಆಯ್ಕೆಗಳಿವೆ. ನಿಮ್ಮ ಹಣಕಾಸಿನ ಅಗತ್ಯಕ್ಕೆ ಅನುಗುಣವಾಗಿ ಹೂಡಿಕೆಯ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಬಹದು. ಈ ಕುರಿತು ವಿಸ್ತೃತ ಮಾಹಿತಿ ಇಲ್ಲಿದೆ.

ಮ್ಯೂಚುವಲ್ ಫಂಡ್
ಮ್ಯೂಚುವಲ್ ಫಂಡ್ ಒಂದು ರೀತಿಯ ಸಾಮೂಹಿಕ ಹೂಡಿಕೆಯಾಗಿದೆ. ಹೂಡಿಕೆದಾರರ ಗುಂಪುಗಳು ಒಟ್ಟಾಗಿ ಷೇರುಗಳು, ಅಲ್ಪಾವಧಿ ಹೂಡಿಕೆಗಳು ಅಥವಾ ಇತರ ಭದ್ರತೆಗಳಲ್ಲಿ ಹೂಡಿಕೆ ಮಾಡುತ್ತವೆ. ಮ್ಯೂಚುವಲ್ ಫಂಡ್‌ಗಳಲ್ಲಿ, ನಿಧಿಯ ಹೂಡಿಕೆಗಳನ್ನು ನಿರ್ಧರಿಸುವ ಮತ್ತು ಲಾಭ ಮತ್ತು ನಷ್ಟದ ಖಾತೆ ನಿರ್ವಹಿಸುವ ನಿಧಿ ವ್ಯವಸ್ಥಾಪಕರಿದ್ದಾರೆ. ಅಂತಹ ಲಾಭ ಮತ್ತು ನಷ್ಟವನ್ನು ಹೂಡಿಕೆದಾರರಿಗೆ ಹಂಚಲಾಗುತ್ತದೆ.


Share with

Leave a Reply

Your email address will not be published. Required fields are marked *