ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದವರನ್ನು ಬೇಟೆಯಾಡಿದ ಅರಣ್ಯ ಅಧಿಕಾರಿಗಳು

Share with

ಸುಳ್ಯ: ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದವರ ಮನೆಗೆ ದಾಳಿ ನಡೆಸಿ ಕಾಡು ಪ್ರಾಣಿ ಮಾಂಸ ಹಾಗೂ ಕೋವಿಯನ್ನು ವಶಪಡಿಸಿಕೊಂಡ ಘಟನೆ ಸಂಪಾಜೆ ವಲಯದ ದಬ್ಬಾಡ್ಕ ಉಪ ವಲಯದ ಪಟ್ಟಿಘಾಟ್ ಸಮೀಪದ ನಡೆದಿದೆ.

forest officers

ಮದನ್ ಕುಮಾರ್ ಹೊಸೂರು, ಪಾನೇಡ್ಕ ಗಣಪತಿ, ಹಾಗೂ ಪ್ರಸನ್ನ ಪಾನೇಡ್ಕ ಇವರ ಮನೆಗೆ ದಾಳಿ ಮಾಡಿದ್ದು, ಈ ವೇಳೆ ಮಾಂಸ ಮತ್ತು ಕೋವಿಯನ್ನು ವಶಪಡಿಸಿಕೊಂಡಿದ್ದು ಆರೋಪಿಗಳು ತಲೆಮಾರೆಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಧಿಕಾರಿ ಕೆ. ಟಿ ಪೂವಯ್ಯ ಇವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯ ಅಧಿಕಾರಿ ಮಧು ಸೂದನ್ ಇವರ ನೇತೃತ್ವದಲ್ಲಿ, ಸಿಬ್ಬಂದಿಗಳಾದ ಉಪ ವಲಯ ಅರಣ್ಯ ಅಧಿಕಾರಿ ನಿಸಾರ್ ಮಹೋಮ್ಮದ್, ಗಸ್ತು ಅರಣ್ಯ ಪಾಲಕರದ ಚಂದ್ರಪ್ಪ ಬಣಕಾರ್, ಕಾರ್ತಿಕ್. ಡಿ ಹಾಗೂ ಸಿಬ್ಬಂದಿಯಾದ ಮನೋಜ್, ದುರ್ಗಾ ಪ್ರಸಾದ್, ಗಗನ್, ಶರತ್, ಶಂಕರ ಪಾಲ್ಗೊಂಡಿದ್ದರು.


Share with

Leave a Reply

Your email address will not be published. Required fields are marked *