ವೀಕ್ಷಕವಾಣಿ: ಬಿಎಂಟಿಸಿ ಬಸ್‌ನಲ್ಲಿ ಮುಸ್ಲಿಂ ಕಂಡಕ್ಟರ್ ಒಬ್ಬರು ಹಸಿರು ಟೋಪಿ ಧರಿಸಿ ಕರ್ತವ್ಯದಲ್ಲಿದ್ದರು. ಇದನ್ನು ಅದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರು ಪ್ರಶ್ನಿಸಿದ್ದಾರೆ. ಸರಕಾರಿ ನೌಕರರು ಸರಕಾರ ಕಾನೂನನ್ನು ಪಾಲಿಸಬೇಕು, ಕರ್ತವ್ಯದಲ್ಲಿದ್ದಾಗ ಧರ್ಮ ಪಾಲನೆ ಮಾಡುವಂತಿಲ್ಲ ಎಂದು ಕಾನೂನು ಪಾಠ ಮಾಡಿದ್ದಾರೆ. ಮಹಿಳೆಯ ಮಾತಿಗೆ ಕಂಡಕ್ಟರ್ ಹಾರಿಕೆ ಉತ್ತರ ಕೊಡುತ್ತಿದ್ದು ಬಳಿಕ ಟೋಪಿ ತೆಗೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.