ಮಂಜೇಶ್ವರ: ಮೂಡುಬಿದಿರೆ ಬಳಿಯ ಹೋಮ್ ಸ್ಟೇ ಈಜು ಕೊಳದಲ್ಲಿ ಡೈ ಹೊಡೆದ ವರ್ಕಾಡಿ ಯುವಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ವರ್ಕಾಡಿ ಬೇಕರಿ ಜಂಕ್ಷನ್ ನಿವಾಸಿ ಕೃಷ್ಣ ಮೂಲ್ಯ ರವರ ಪುತ್ರ ಮೇಸ್ತ್ರಿ ಕೆಲಸಗಾರ ಪುನೀತ್ [29] ಮೃತಪಟ್ಟಿದ್ದಾರೆ. ಪುನೀತ್ ಮತ್ತು ಇಬ್ಬರು ಸಹೋದರರು ಹಾಗೂ ಸಂಬoಧಿಕರು ಸೇರಿ ಒಟ್ಟು 9 ಮಂದಿ ಶನಿವಾರ ಸಂಜೆ ಮೂಡುಬಿದಿರೆ ಸಮೀಪದ ಹೊಸಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಗ್ರುಗುಡ್ಡೆ ಬಳಿಯ ಹೋಮ್ ಸ್ಟೇಗೆ ತೆರಳಿದ್ದರು. ಅಲ್ಲಿ ಭಾನುವಾರ ಮುಂಜಾನೆ ಸುಮಾರು 1:15ರ ವೇಳೆ ಪುನೀತ್ ಅಲ್ಲಿನ ಈಜು ಕೊಳದಲ್ಲಿ ಡೈ ಹೊಡೆದಿದ್ದಾನೆ ಈ ವೇಳೆ ಉಳಿದವರು ಮೇಲ್ಗಡೆ ಇದ್ದರು. ಈಜು ಕೊಳದಿಂದ ಅಲ್ಪ ಹೊತ್ತು ಕಳೆದರೂ ಪುನೀತ್ ನೀರಿನಿಂದ ಮೇಲೆ ಬರಲಿಲ್ಲ ಬಳಿಕ ಸಹೋದರರು ನೋಡಿದಾಗ ಪ್ರಜ್ಞೆ ತಪ್ಪಿ ನೀರಿನಲ್ಲಿ ಮುಗುಗಿದ್ದರು. ಕೂಡಲೇ ಮೇಲೆತ್ತಿ ಸಮೀಪದ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದರು. ಹಣೆಯ ಭಾಗದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿದೆ ನೀರಿಗೆ ಡೈ ಹೊಡೆದ ರಭಸಕ್ಕೆ ಗಾಯಗೊಂಡು ಪ್ರಜ್ಞೆ ತಪ್ಪಿ ನೀರಿನಲ್ಲಿ ಮುಳುಗಿರ ಬಹುದೆಂದು ಅಂದಾಜಿಸಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಮೂಡುಬಿದಿರೆ ಸರಕಾರಿ ಆಸ್ಪತ್ರೆಯಲ್ಲಿ ನಡೆದು ಭಾನುವಾರ ಸಂಜೆ ಮೊರತ್ತಣೆಯ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೇಯಿತು. ಮೃತರು ಅವಿವಾಹಿತರಾಗಿದ್ದಾರೆ. ತಂದೆ, ತಾಯಿ ಗೌರಿ, ಸಹೋದರರಾದ ಸಂಜಿತ್, ಅಕ್ಷಿತ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಆನಂದ ತಚ್ಚಿರೆ, ವಸಂತ ಎಸ್, ವಿವೇಕಾನಂದ ಶೆಟ್ಟಿ ಮೊದಲಾದವರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.