ಪ್ರತಿಯೊಬ್ಬ ಕೂಡಾ ತಮ್ಮ ಆರೋಗ್ಯದ ಜೊತೆಗೆ ದೇಹ ಸೌಂದರ್ಯಕ್ಕೂ ಹೆಚ್ಚು ಪ್ರಾಧಾನ್ಯತೆ ನೀಡುತ್ತಾನೆ. ಪುರುಷರಿಗಿಂತ ಕೊಂಚ ಹೆಚ್ಚು ಮಹಿಳೆಯರು ದೇಹ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಈಗಿನ ಕಾಲದಲ್ಲಿ ಝೀರೋ ಫಿಗರ್ಗೆ ಮಾರು ಹೋಗುವವರು ಅನೇಕ ವಿಧಧ ಡಯಟ್ಗಳನ್ನು ಮಾಡುವ ಮೂಲಕ ಜಿಮ್ಗಳಿಗೆ ಹೋಗುವ ಮೂಲಕ ದೇಹದ ತೂಕವನ್ನು ಇಳಿಸಿಕೊಳ್ಳುತ್ತಾರೆ. ಇದರ ಜೊತೆಗೆ ಒಂದಷ್ಟು ಆರೋಗ್ಯರ ಆಹಾರದೊಂದಿಗೆ ದೇಹದ ತೂಕವನ್ನು ಇಳಿಸಿಕೊಳ್ಳಬಹುದು.
ತೂಕ ನಷ್ಟದ ವಿಷಯಕ್ಕೆ ಬಂದಾಗ, ಫಲಿತಾಂಶಗಳನ್ನು ಹೆಚ್ಚಿಸುವ ಮತ್ತು ವೇಗಗೊಳಿಸುವ ಆಯ್ಕೆಗಳನ್ನು ಹುಡುಕುವುದು ಸಾಮಾನ್ಯವಾಗಿದೆ, ಆದರೆ ಇದಕ್ಕೆ ಯಾವುದೇ ಮ್ಯಾಜಿಕ್ ಸೂತ್ರಗಳಿಲ್ಲ, ಆದರೆ ಪ್ರಕ್ರಿಯೆಗೆ ಸಹಾಯ ಮಾಡುವ ವಿಧಾನಗಳು ಇವೆ. ಅದರಲ್ಲಿ ಹಣ್ಣಿನ ರಸಗಳೂ ಒಂದು..
- ಕಿತ್ತಳೆ ಮತ್ತು ದಾಳಿಂಬೆ ಜ್ಯೂಸ್
- ಬೀಟ್ರೂಟ್, ಕ್ಯಾರೆಟ್, ಬಾಳೆಹ್ಣು ಮತ್ತು ಶುಂಠಿ ಜ್ಯೂಸ್
- ಬೀಟ್ರೂಟ್, ಸ್ಟ್ರಾಬೆರಿ ಮತ್ತು ರಾಸ್ಪ್ಬೆರಿ ಜ್ಯೂಸ್
- ನಿಂಬೆ, ಕಲ್ಲಂಗಡಿ ಮತ್ತು ರಾಸ್ಪ್ಬೆರಿ ಜ್ಯೂಸ್
- ಪಾಲಕ್, ಹಸಿರು ಸೇಬು, ಶುಂಠಿ ಜ್ಯೂಸ್
- ಸೆಲರಿ, ಪಾಲಕ್, ಸೌತೆಕಾಯಿ, ಹಸಿರು ಸೇಬು, ಪುದೀನಾ ಎಲೆಗಳು ಮತ್ತು ತಾಜಾ ಶುಂಠಿ ಜ್ಯೂಸ್
- ಕ್ಯಾರೆಟ್, ಸೇಬು, ಬಾಳೆಹಣ್ಣು ಮತ್ತು ಶುಂಠಿ ಜ್ಯೂಸ್
- ಬ್ಲೂಬೆರ್ರಿ, ನಿಂಬೆ ಮತ್ತು ಚಿಯಾ ಜ್ಯೂಸ್
- ಸ್ಟ್ರಾಬೆರಿ, ಸೌತೆಕಾಯಿ, ಸೇಬು ಮತ್ತು ಕ್ಯಾರೆಟ್ ಜ್ಯೂಸ್
- ಕಿವಿ, ಪುದೀನ ಮತ್ತು ನಿಂಬೆ ಜ್ಯೂಸ್