ಬಂಟ್ವಾಳ: ಮೊಡಂಕಾಪು ಮೌಂಟ್ ಕಾರ್ಮೆಲ್ ಕಾಲೇಜು ವಿದ್ಯಾರ್ಥಿನಿ ಜೋಶಾಲ್ ಪಿಂಟೋ ಅವರು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 592 ಅಂಕ ಗಳಿಸಿ ಸಾಧನೆ ಮೆರೆದಿದ್ದಾರೆ.
ಇವರು ವಾಣಿಜ್ಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಆರನೇ ರ್ಯಾಂಕ್ ಪಡೆದಿದ್ದಾರೆ.
ವಗ್ಗ ಮಾಂಗಜೆಯ ಪ್ರವೀಣ್ ಪಿಂಟೋ ಹಾಗೂ ಐಡ ಲೋಬೊ ಅವರ ದ್ವಿತೀಯ ಪುತ್ರಿಯಾಗಿರುವ ಇವರು ಮುಂದೆ ಚಾರ್ಟರ್ಡ್ ಅಕೌಂಟೆಂಟ್ ಆಗುವ ಕನಸು ಹೊಂದಿದ್ದಾರೆ.