ಉಡುಪಿ- ಕಾಸರಗೋಡು 400 ಕೆವಿ ಯೋಜನೆ: ಸೆಪ್ಟೆಂಬರ್‌ನಲ್ಲಿ ಕಾರ್ಯಾರಂಭ ಸಾಧ್ಯತೆ

Share with

ವಿದ್ಯುತ್‌ ಬಿಕ್ಕಟ್ಟಿಗೆ ಪರಿಹಾರ: ಕೇರಳ ಮಾರ್ಗ ಜೋಡಣೆ ಪೂರ್ಣ | ಕಾಸರಗೋಡು ವಿಭಾಗದ ಒಟ್ಟು 47 ಕಿ.ಮೀ. ಮಾರ್ಗದಲ್ಲಿ, 12 ಕಿ.ಮೀ. ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆ.

ಮುಳ್ಳೇರಿಯ: ಕಾಸರಗೋಡು ಒಳಗೊಂಡಿರುವ ಉತ್ತರ ಕೇರಳದ ವಿದ್ಯುತ್ ಬಿಕ್ಕಟ್ಟು ಪರಿಹರಿಸಲು ಜಾರಿಗೆ ತರಲಾಗುತ್ತಿರುವ ಉಡುಪಿ- ಕರಿಂದಳಂ (ಕಾಸರಗೋಡು) 400 ಕೆವಿ ಯೋಜನೆಯ ಮಾರ್ಗ ಜೋಡಣೆ ಕಾಸರಗೋಡು ಜಿಲ್ಲೆಯಲ್ಲಿ ಪೂರ್ಣಗೊಂಡಿದೆ.

ಕರ್ನಾಟಕದ ಉಡುಪಿಯಿಂದ ಜಿಲ್ಲಾ ಗಡಿಗೆ ಮಾರ್ಗ ಜೋಡಣೆ ಪೂರ್ಣಗೊಂಡ ನಂತರ ಯೋಜನೆ ಕಾರ್ಯಾರಂಭ ಮಾಡಬಹುದು. ಜಿಲ್ಲೆಯಲ್ಲಿ ಪ್ರಸ್ತುತ ಗೋಪುರಗಳ ಮೇಲ್ಬಾಗದ ಮೂಲಕ ಆಪ್ಟಿಕಲ್ ಫೈಬರ್ ಕೇಬಲ್ ಹಾಕುವ ಕೆಲಸ ನಡೆಯುತ್ತಿದೆ.

ಕರ್ನಾಟಕದ ಉಡುಪಿಯಿಂದ ಜಿಲ್ಲಾ ಗಡಿಗೆ ಕೆಲಸ ವೇಗವಾಗಿ ನಡೆಯುತ್ತಿದೆ. ಗೋಪುರಗಳ ನಿರ್ಮಾಣ ಮತ್ತು ಮಾರ್ಗ ಜೋಡಣೆ ಏಕಕಾಲದಲ್ಲಿ ನಡೆಯುತ್ತಿದೆ. ನಿರ್ಮಾಣ ಪೂರ್ಣಗೊಂಡ ನಂತರ ಸೆಪ್ಟೆಂಬರ್‌ನಲ್ಲಿ ಯೋಜನೆಯನ್ನು ಕಾರ್ಯಾರಂಭ ಮಾಡುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದಾರೆ.

ಈ ಮಾರ್ಗ ಹಾದುಹೋಗುವ ಭೂಮಿ ಮತ್ತು ಕೃಷಿ ಬೆಳೆಗಳಿಗೆ ಪರಿಹಾರ ಪ್ಯಾಕೇಜ್ ಘೋಷಣೆಯೊಂದಿಗೆ ಭೂಮಾಲಕರ ಆರಂಭಿಕ ಆಕ್ಷೇಪಣೆಗಳನ್ನು ಸಂಪೂರ್ಣ ವಾಗಿ ಬಗೆಹರಿಸಲಾಗಿದೆ. ಆದ್ದರಿಂದ, ನಿರ್ಮಾಣವನ್ನು ವೇಗಗೊಳಿಸಲು ಯಾವುದೇ

ಈ ಅಂತರ ರಾಜ್ಯ ವಿದ್ಯುತ್ ಯೋಜನೆಯನ್ನು ಸ್ಟರ್ಲೈಟ್ ಪವರ್ ಕಂಪೆನಿಯು ಕೇಂದ್ರ ವಿದ್ಯುತ್‌ ಸಚಿವಾಲಯದ ಅಡಿಯಲ್ಲಿರುವ REC ಟ್ರಾನ್‌ಸ್ಮಿಷನ್ ಪ್ರಾಜೆಕ್ಟ್ ಕಂಪೆನಿ ಲಿಮಿಟೆಡ್ ಮೂಲಕ ಕಾರ್ಯಗತಗೊಳಿಸುತ್ತಿದೆ.

ಕಾಸರಗೋಡು, ಕಣ್ಣೂರು ಮತ್ತು ವಯನಾಡು ಜಿಲ್ಲೆಗಳಲ್ಲಿನ ವಿದ್ಯುತ್ ಕೊರತೆಯನ್ನು ನೀಗಿಸಲು ಈ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ.

ಕರ್ನಾಟಕದ ಉಡುಪಿಯಲ್ಲಿರುವ ಉಷ್ಣ ವಿದ್ಯುತ್ ಸ್ಥಾವರದಿಂದ ಕಾಸರಗೋಡಿನ ಕರಿಂದಳಂನಲ್ಲಿರುವ 400 ಕೆವಿ ಸಬ್‌ಸ್ಟೇಷನ್‌ಗೆ ವಿದ್ಯುತ್ ಪೂರೈಸುವ ಯೋಜನೆ ಇದಾಗಿದೆ.

ಈ ಯೋಜನೆಯು ಕರಿಂದಳಂನಲ್ಲಿ ಸರಕಾರವು ಗುತ್ತಿಗೆಗೆ ಪಡೆದ 12 ಎಕರೆ ಭೂಮಿಯಲ್ಲಿ ಸಬ್‌ಸ್ಟೇಷನ್‌ ನಿರ್ಮಿಸಲಾಗಿದೆ. ನಿರ್ಮಾಣ ಈಗಾಗಲೇ ಪೂರ್ಣಗೊಂಡಿದೆ

ಉಡುಪಿಯಿಂದ ಕರಿಂದಳಂ ಮಾರ್ಗದ ಉದ್ದ 115 ಕಿ.ಮೀ. ಇದರಲ್ಲಿ 47 ಕಿ.ಮೀ. ಕಾಸರಗೋಡು ಜಿಲ್ಲೆಯಲ್ಲಿದೆ ಮತ್ತು ಉಳಿದವು ಕರ್ನಾಟಕದಲ್ಲಿದೆ. ಕಾಸರಗೋಡು ವಿಭಾಗದ ಒಟ್ಟು 47 ಕಿ.ಮೀ. ಮಾರ್ಗದಲ್ಲಿ, 12 ಕಿ.ಮೀ. ಆಪ್ಟಿಕಲ್ ಫೈಬರ್ ಕೇಬಲ್ ಹಾಕಬೇಕಾಗಿದೆ. ಇದರ ಅನಂತರ ಜಿಲ್ಲೆಯಲ್ಲಿ ಕೆಲಸ ಪೂರ್ಣಗೊಳ್ಳಲಿದೆ.

ಕರಿಂದಳನಿಂದ ವಯನಾಡ್‌ಗೆ ವಿದ್ಯುತ್ ಪೂರೈಸುವ 125 ಕಿ.ಮೀ. ಮಾರ್ಗದ ಮತ್ತೂಂದು ಯೋಜನೆಯೂ ಸಹ ನಡೆಯುತ್ತಿದೆ. ಈ ಯೋಜನೆ ಕಾರ್ಯಾರಂಭಮಾಡುವುದರೊಂದಿಗೆ, ರಾಜ್ಯದ ವಿದ್ಯುತ್ ಆಮದು ಸಾಮರ್ಥ್ಯವು 800 ಮೆಗಾವ್ಯಾಟ್‌ಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.


Share with

Leave a Reply

Your email address will not be published. Required fields are marked *