ಹೊಸದಿಲ್ಲಿ: ಐಪಿಎಸ್ ಅಧಿಕಾರಿ ಸಂಜುಕ್ತಾ ಪರಾಶರ್ ಅವರನ್ನು ಸಿಆರ್‌ಪಿಎಫ್‌ನ ವಿಶೇಷ ಅರಣ್ಯ ಯುದ್ದ ಕಮಾಂಡೋ ಘಟಕವಾದ “ಕೋಬ್ರಾ’ಗೆ ಇನ್ಸ್‌ಪೆಕ್ಟರ್ ಜನರಲ್(ಐಜಿ) ಆಗಿ ನೇಮಕ ಮಾಡಲಾಗಿದ್ದು, ಈ ಹುದ್ದೆಗೇರುತ್ತಿರುವ ಪ್ರಪ್ರಥಮ ಮಹಿಳೆ ಸಂಜುಕ್ತಾ ಆಗಿದ್ದಾರೆ.

ಇವರು ಅಸ್ಸಾಂ- ಮೇಘಾಲಯ ಕೇಡರ್‌ನ 2006ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಸಿಆರ್‌ಪಿಎಫ್‌ನ ಪ್ರಧಾನ ಕಚೇರಿ ಕಳೆದ ವಾರ ಈ ಬಗ್ಗೆ ಆದೇಶ ಹೊರಡಿಸಿದೆ.
1996ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ದಾನೇಶ್ ರಾಣಾ ಸ್ಥಾನವನ್ನು ಸಂಜುಕ್ತಾ ತುಂಬಲಿದ್ದಾರೆ. ಅವರು ಎನ್‌ಐಎಯಲ್ಲೂ ಸೇವೆ ಸಲ್ಲಿಸಿದ್ದಾರೆ.




