ಆ.25ರಂದು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ, ವ್ರತಾಚರಣೆ

Share with

ಕಾಸರಗೋಡು: ಇಲ್ಲಿನ ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಈ ವರ್ಷವೂ ವರಮಹಾಲಕ್ಷ್ಮೀ ಪೂಜೆ ಹಾಗೂ ವ್ರತಾಚರಣೆ ಆ.25ರಂದು ಜರಗಲಿದೆ. ಅಪರಾಹ್ನ 3.30ಕ್ಕೆ ಪ್ರಾರ್ಥನೆ ಹಾಗೂ ಕಲಶ ಪ್ರತಿಷ್ಠೆ ನಡೆಯಲಿದೆ. ಸಂಜೆ 6.30ಕ್ಕೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಲಿದೆ.

ಪೂಜೆಯಲ್ಲಿ ಭಾಗವಹಿಸುವವರು ಮುಂಚಿತವಾಗಿ ಹೆಸರು ನೋಂದಾಯಿಸಬೇಕಾಗುತ್ತದೆ(ರೂ.150/-). ಪೂಜೆಗೆ ಹೆಸರು ನೋಂದಾವಣೆ ಮಾಡಿಕೊಂಡವರು ಪೂಜಾ ದಿನದಂದು ವ್ರತದಲ್ಲಿರಬೇಕಾಗುತ್ತದೆ. ಪೂಜೆಗೆ ಬೇಕಾದ ಹೂ, ಹ‍ಣ್ಣುಕಾಯಿ, ಹಿಂಗಾರ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಪೂಜೆಗೆ ಮುಂಚಿತವಾಗಿ ತಂದೊಪ್ಪಿಸಬೇಕು. ಪೂಜೆಯಲ್ಲಿ ಭಾಗವಹಿಸಲು ಅನಾನುಕೂಲವಾದಲ್ಲಿ ಪೂಜಾ ರಶೀದಿಯನ್ನು ತೋರಿಸಿ ಪೂಜಾ ಪ್ರಸಾದವನ್ನು ದೇವಸ್ಥಾನದಿಂದ ಮರುದಿನ ಮಧ್ಯಾಹ್ನ 12 ಗಂಟೆಯ ಮೊದಲು ಪಡೆದುಕೊಳ್ಳಬಹುದಾಗಿದೆ ಎಂದು ಸಣ್ಣಕೂಡ್ಲು, ಶಿವನಗರ ಶ್ರೀ ಗುಡ್ಡೆ ಮಹಾಲಿಂಗೇಶ್ವರ ಮಹಿಳಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.


Share with

Leave a Reply

Your email address will not be published. Required fields are marked *