
ತೀವ್ರ ಚಳಿಯ ನಡುವೆಯೂ ಕೋಟ್ಯಂತರ ಭಕ್ತರು ಮಹಾಕುಂಭ ಮೇಳಕ್ಕೆ ಆಗಮಿಸುತ್ತಿದ್ದಾರೆ. ಇಲ್ಲಿ ವಿಪರೀತ ಚಳಿ, ಜನಜಂಗುಳಿಯಿಂದ ಜನರು ಕೂಡ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಮಂಗಳವಾರ NCP (SP) ನಾಯಕ ಮಹೇಶ್ ಕೋರೆ, ನಾಗ ಸನ್ಯಾಸಿ ಸೇರಿದಂತೆ 6 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನೋಯ್ಡದಿಂದ ಇಬ್ಬರು ಮಹಾಂತರು ಮತ್ತು ಮಾಜಿ ಸೇನಾ ಬ್ರಿಗೇಡಿಯರ್ ಸೇರಿದಂತೆ 10 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಭ ಮೇಳದ ಆಸ್ಪತ್ರೆಗಳಲ್ಲಿ 6 ಸಾವಿರ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.