ಅಕ್ಷಯ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Share with

ಪುತ್ತೂರು : ಅಕ್ಷಯ ಕಾಲೇಜು ಪುತ್ತೂರು ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಯೋಗ ಶಿಕ್ಷಕಿ ಶ್ರೀಮತಿ ಹೇಮಚಂದ್ರಹಾಸ ಅಗಲಿ ಅವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ, ಯೋಗದ ಮಹತ್ವವನ್ನು ಸ್ವಯಂಸೇವಕರಿಗೆ ತಿಳಿಸಿ, ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರಿಗೂ ಯೋಗ ತರಬೇತಿಯನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸ್ವಯಂ ಸೇವಕಿ ಪ್ರಕೃತಿ ಪ್ರಾರ್ಥಿಸಿ, ವೇನುಶ್ರೀ ಸ್ವಾಗತಿಸಿದರೆ ದೀಕ್ಷಾ ಧನ್ಯವಾದ ಸಲ್ಲಿಸಿದರು. ವರ್ಷಿಣಿ ನಿರೂಪಿಸಿದರು. ಸಮಾರಂಭದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಕಿಶೋರ್ ರೈ, ಘಟಕ ನಾಯಕ ಜೀವನ್, ನಾಯಕಿ ನವಮಿ ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *