ಕಡೆಕಾರು ದೇವರ ಕೆರೆಯಲ್ಲಿ ಸಿಕ್ಕಿದ 22 KG ತೂಕದ ಸಿಹಿನೀರಿನ ಮೀನು

Share with

ಮಲ್ಪೆ: ಕಡೆಕಾರಿನ ದೇವರ ಕೆರೆಯಲ್ಲಿ ಸುಮಾರು 22 ಕೆ. ಜಿ. ತೂಕ, 4 ಅಡಿ ಉದ್ದದ್ದ ಪಂಕಜ್ ಹೆಸರಿನ ಸಿಹಿನೀರಿನ ಮೀನು ರವಿವಾರ ಬೆಳಗ್ಗೆ ನೀರಿನ ಮೇಲ್ಬಾಗದಲ್ಲಿ ಒದ್ದಾಡುತ್ತಿರುವುದು ಕೆರೆಯಲ್ಲಿ ಈಜಲು ಬರುವ ರವಿ ಕಡೆಕಾರ್, ಚಂದ್ರ ಕುಂದ‌ರ್ ಅವರು ಗಮನಿಸಿ, ಮೀನನ್ನು ಹಿಡಿದು ಮೇಲೆ ತಂದಿದ್ದಾರೆ.

ಸ್ಥಳೀಯರೊಬ್ಬರು ಈ ಹಿಂದೆ ಸಿಹಿನೀರಿನ ಕೆಲವು ಜಾತಿಯ ಮೀನಿನ ಮರಿಯನ್ನು ಈ ಕೆರೆಗೆ ಹಾಕಿದ್ದರು. ಸಾಮಾನ್ಯವಾಗಿ ಒಳನಾಡಿನ ಕೆರೆ, ಡ್ಯಾಂಗಳಲ್ಲಿರುವ ಈ ಮೀನು ಮಲ್ಪೆ ಹಾಗೂ ಇತರ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತದೆ ಎನ್ನಲಾಗಿದೆ.


Share with

Leave a Reply

Your email address will not be published. Required fields are marked *