ಮಂಜೇಶ್ವರ: ಕಡಂಬಾರು ಚೆಂಬಪದವು ನಿವಾಸಿ ಬಿ.ಎಂ ಸುಬ್ರಾಯ ಆಚಾರ್ಯರ ಪತ್ನಿ ಪಾರ್ವತಿ [89 ವ] ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.


ಮೃತರು ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದ ಶ್ರೀ ಕಾಳಿ ಕಾಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘದ ಮಾಜಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಮಕ್ಕಳಾದ ಬಿ.ಎಂ ಶ್ರೀನಿವಾಸ ಆಚಾರ್ಯ, ಬಿ.ಎಂ ಅನಂತ ಆಚಾರ್ಯ, ಬಿ.ಎಂ ಯದುನಂದನ ಆಚಾರ್ಯ [ ಅಧ್ಯಕ್ಷರು ಬಂಗ್ರಮoಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ಕ್ಷೇತ್ರ], ಬಿ.ಎಂ ಸತೀಶ ಆಚಾರ್ಯ, ಬಿ.ಎಂ ಪ್ರವೀಣ ಆಚಾರ್ಯ, ನಾಗವೇಣಿ, ನಳಿನಾಕ್ಷಿ, ಹೇಮಲತಾ, ಅಳಿಯಂದಿರಾದ ಭಾಸ್ಕರ ಆಚಾರ್ಯ, ಪಾಂಡುರAಗ ಆಚಾರ್ಯ, ಯಶವಂತ ಆಚಾರ್ಯ, ಸೊಸೆಯಂದಿರಾದ ಕಮಲಾವತಿ, ಭಾನುಮತಿ, ವಿಶಾಲಾಕ್ಷಿ, ಶಾರದಾ, ಭವಾನಿ, ಸಹೋದರ ವಾಮನ ಆಚಾರ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.




