
ಉಪ್ಪಳ: ಹೇರೂರು ಶಂಕರ ಆಳ್ವ ಮೆಮೋರಿಯಲ್ ಚಾರಿಟೇಬಲ್ ಸೊಸೈಟಿ ಸೇವಾಭಾರತಿ ಮಂಗಲ್ಪಾಡಿ ಮತ್ತು ಸೇವಾ ಸಹಕಾರಿ ಬ್ಯಾಂಕ್ ಮಂಗಲ್ಪಾಡಿ ಇದರ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರ ಸಹಕಾರದೊಂದಿಗೆ [ದಿ] ಜನಾರ್ಧನ ಪ್ರತಾಪನಗರ ಇವರ ಸ್ಮರಣಾರ್ಥವಾಗಿ ರಕ್ತದಾನ ಶಿಬಿರ ನಾಳೆ [25-8-2024] ರಂದು ಬೆಳಿಗ್ಗೆ 9.15ರಿಂದ ಐಲ ಶ್ರೀ ದುರ್ಗಾಪರಮೇಶ್ವರೀ ಕಲಾಭವನದಲ್ಲಿ ನಡೆಯಲಿದೆ. ಆರ್.ಎಸ್.ಎಸ್ ಕಾಸರಗೋಡು ಜಿಲ್ಲಾ ಮಾನ್ಯ ಸಂಘಚಾಲಕ್ ಪ್ರಭಾಕರನ್ ನಾಯರ್ ಅಧ್ಯಕ್ಷತೆ ವಹಿಸುವರು. ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸುವರು. ಐಲ ಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು, ಮಂಗಳೂರು ಕೆ.ಎಂ.ಸಿ ಆಸ್ಪತ್ರೆ ಬ್ಲಡ್ ಬೇಂಕ್ ನಿರ್ಧೇಕರಾದ ಡಾ.ದೀಪ ಅಡಿಗ, ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಅಧೀಕ್ಷಕರರಾದ ಡಾ.ಅಂಬು.ವಿ, ಹೇರೂರು ಶಂಕರ ಆಳ್ವ ಮೆಮೋರಿಯಲ್ ಚಾರಿಟೇಬಲ್ ಸೊಸೈಟಿ ಮಂಗಲ್ಪಾಡಿ ಇದರ ಅಧ್ಯಕ್ಷ ಕೃಷ್ಣ.ಪಿ ಬಂದ್ಯೋಡು, ಮಂಗಲ್ಪಾಡಿ ಸೇವಾಸಹಕಾರಿ ಬ್ಯಾಂಕ್ನ ಅಧ್ಯಕ್ಷ ಪ್ರೇಮ್ ಕುಮಾರ್ ಐಲ ಉಪಸ್ಥಿತರಿರುವರು.





