ಸೇನಾ ವಾಹನದ ಮೇಲೆ ದಾಳಿ ನಡೆಸಿದ ಉಗ್ರನ ಹತ್ಯೆ

Share with

ಜಮ್ಮು ಕಾಶ್ಮೀರ ವಿಧಾನ ಸಭೆ ಚುನಾವಣೆಯ ಬಳಿಕ ಉಗ್ರರ ದಾಳಿ ಜೋರಾಗಿದ್ದು ನಾಗರಿಕರನ್ನು ಗುರಿಯಾಗಿಸಿಕೊಂಡು ಅಟ್ಯಾಕ್ ಮಾಡುತ್ತಿದ್ದಾರೆ.

ಇದೀಗ ಜಮ್ಮುವಿನ ಅನ್ ಸೆಕ್ಟರ್‌ನಲ್ಲಿ ಸೇನಾ ವಾಹನದ ಮೇಲೆ ಫೈರಿಂಗ್‌ ನಡೆಸಿದ್ದಾರೆ. ತಕ್ಷಣ ಯೋಧರು ಪ್ರತಿ ದಾಳಿ ನಡೆಸಿ, ಉಗ್ರನನ್ನು ಕೊಂದು ಹಾಕಿದ್ದಾರೆ. ತಪ್ಪಿಸಿಕೊಂಡ ಉಗ್ರರಿಗಾಗಿ ತೀವ್ರ ಶೋಧ ಮುಂದುವರಿದಿದೆ. ಕಳೆದ ವಾರವೊಂದರಲ್ಲೇ ಕಣಿವೆಯಲ್ಲಿ ಇಬ್ಬರು ಯೋಧರು ಸೇರಿದಂತೆ 12 ಮಂದಿ ಮೃತಪಟ್ಟಿದ್ದರು.


Share with