ಜನವರಿ 12 ರಾಷ್ಟ್ರೀಯ ಯುವ ದಿನ

Share with

ಮೊಟ್ಟ ಮೊದಲ ಆಧ್ಯಾತ್ಮಿಕ ಚಿಂತಕ, ಧಾರ್ಮಿಕ ಗುರು ಸ್ವಾಮಿ ವಿವೇಕಾನಂದರ ಜನ್ಮದಿನವಿಂದು. ಸ್ವಾಮಿ ವಿವೇಕಾನಂದರು (ಬಾಲ್ಯದ ಹೆಸರು: ನರೇಂದ್ರನಾಥ ದತ್ತ) ಜ.12,1863ರಲ್ಲಿ ಕೋಳ್ಕೊತ್ತಾದಲ್ಲಿ ಜನಿಸಿದರು.

ರಾಮಕೃಷ್ಣರ ಪರಮಹಂಸರ ಮಾರ್ಗದರ್ಶದಲ್ಲಿ ಜಗತ್ತಿನೆಲ್ಲೆಡೆ ಹಿಂದೂ ಧರ್ಮದ ಮಹತ್ವವನ್ನು ಸಾರಿದರು. ಅವರ ಚಿಂತನೆ ದೇಶದ ಯುವಕ, ಯುವತಿಯರಿಗೆ ಎಂದಿಗೂ ದಾರಿದೀಪ. ಹೀಗಾಗಿ ಈ ದಿನವನ್ನು ರಾಷ್ಟ್ರೀಯ ಯುವದಿನವೆಂದು ಸಹ ಆಚರಿಸಲಾಗುತ್ತದೆ. ಜುಲೈ 4, 1902ರಂದು ಅವರ ಇಹಲೋಕ ತ್ಯಜಿಸಿದರು.

ವಿವೇಕಾನಂದರ ಶುಭ ಸಂದೇಶಗಳು

🔹ಶತಮೂರ್ಖ ಕೂಡಾ ತನ್ನ ಹೃದಯಕ್ಕೆ ಹತ್ತಿರವಾದ ಕೆಲಸವನ್ನು ಸಾಧಿಸಬಲ್ಲ. ಆದರೆ ಮಾಡುವ ಕೆಲಸವನ್ನು ತನ್ನ ಅಭಿರುಚಿಗೆ ತಕ್ಕಂತೆ ರೂಪಿಸುವವನು ಮಾತ್ರ ಬುದ್ಧಿವಂತ.

🔹ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಏನನ್ನು ಯೋಚಿಸುತ್ತೀರೋ ಅದರ ಬಗ್ಗೆ ಎಚ್ಚರದಿಂದಿರಿ.

🔹ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ.

🔹ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ.


Share with