ಕಾಸರಗೋಡು: ಕಾಸರಗೋಡು ತಾಲೂಕು ಸೇರಿದಂತೆ ಹಲವೆಡೆ ಸುರಿದ ಧಾರಾಕಾರ ಗಾಳಿ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ಕಾಸರಗೋಡು ತಾಲೂಕಿನ ಮಧೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಲ್ಗುಡ್ಡೆ ಆರ್ ಡಿ ನಗರದಲ್ಲಿರುವ ಮನೆಯೊಂದಕ್ಕೆ ಬೃಹದಾಕಾರದ ಮರವೊಂದು ಬಿದ್ದಿದ್ದು ಅದೃಷ್ಟವಶಾತ್ ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು ಬೀಸಿದ ಧಾರಾಕಾರ ಮಳೆ ಹಾಗೂ ಬಿರುಸಿನಗಾಳಿಗೆ ಮನೆಯ ಮುಂಭಾಗದಲ್ಲಿದ್ದ ಮರವೊಂದು ಬುಡ ಸಮೇತ ಮನೆ ಮೇಲೆ ಬಿದ್ದಿದೆ. ಈ ವೇಳೆ ಮನೆ ಮಂದಿ ಮನೆ ಒಳಗಡೆ ಇದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.


ಘಟನಾ ಸ್ಥಳಕ್ಕೆ ಮಧೂರು ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ ಕೆ, ಕಾರ್ಯದರ್ಶಿ ಶಾಜಿಮೋನು, ವಾರ್ಡ್ ಸದಸ್ಯೆ ಸೌಮ್ಯ ದಿನೇಶ್ ಭೇಟಿ ನೀಡಿದ್ದಾರೆ.




