ಮಂಜೇಶ್ವರ: ಸ್ವಂತ ತಾಯಿಯನ್ನು ದಾರುಣವಾಗಿ ಬೆಂಕಿ ಹಚ್ಚಿ ಕೊಂದು, ಸೋದರತ್ತೆಯನ್ನು ಕೊಲೆಗೆ ಯತ್ನಿಸಿ ಪರಾರಿಯಾದ ವರ್ಕಾಡಿ ನಲ್ಲೆಂಗಿ ನಿವಾಸಿ ಮೇಲ್ವಿನ್ ನನ್ನು ಮಂಜೇಶ್ವರ ಪೊಲೀಸರು ಕುಂದಾಪುರ ಕೊಲ್ಲೂರು ಸಮೀಪದಿಂದ ಸೆರೆ ಹಿಡಿದಿದ್ದಾರೆ.

ಆರೋಪಿಯ ಮೊಬೈಲ್ ಲೊಕೇಶನ್ ಅನ್ನು ಹಿಡಿದುಕೊಂಡು ಬೆನ್ನು ಹತ್ತಿದ್ದ ಮಂಜೇಶ್ವರ ಪೊಲೀಸರು ಘಟನೆ ನಡೆದ ಗಂಟೆಯೊಳಗಡೆ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರ ತನಿಖೆ ಬಳಿಕ ಕೊಲೆಗೆ ಕಾರಣ ತಿಳಿದು ಬರಬೇಕಿದೆ.




