ಪುರಿ: ಜಗತ್ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ಶುಕ್ರವಾರ(ಇಂದಿನಿಂದ) ಪ್ರಾರಂಭವಾಗಲಿದೆ. ಈ ವೇಳೆ ಜಗನ್ನಾಥ, ಬಲಭದ್ರ ಹಾಗೂ ಸುಭದ್ರೆಯರ ವಿಗ್ರಹಗಳನ್ನು ಜಗನ್ನಾಥ ದೇಗುಲದಿಂದ ಗುಂಡಿಚಾ ದೇಗುಲದವರೆಗೆ ರಥದಲ್ಲಿ ಕರೆದೊಯ್ಯಲಾಗುತ್ತದೆ.

ಶುಕ್ಲ ಪಕ್ಷದ 2ನೇ ದಿನ ಯಾತ್ರೆಗೆ ಚಾಲನೆ ನೀಡಲಾಗುತ್ತಿದೆ. 9 ದಿನಗಳ ಕಾಲ ರಥಯಾತ್ರೆ ನಡೆಯಲಿದ್ದು, ನೀಲಾದ್ರಿ ಬಿಜಯದೊಂದಿಗೆ ಜು.5ರಂದು ಅಂತಿಮಗೊಳ್ಳಲಿದೆ.
ತನ್ನ ತಾಯಿಯ ಮನೆಗೆ ಶ್ರೀಕೃಷ್ಣ ಪರಮಾತ್ಮ ಭೇಟಿ ನೀಡಿದ್ದನ್ನು ಸ್ಮರಿಸಲು ರಥಯಾತ್ರೆ ನಡೆಸಲಾಗುತ್ತದೆ ಎಂಬ ನಂಬಿಕೆಯಿದೆ.




