ಕಂದಾಯ ಇಲಾಖೆಯ ಅನಾಸ್ಥೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

Share with

ನುಗ್ಗೇಹಳ್ಳಿ: ಕಂದಾಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಹೋಬಳಿಯ ಹೆಬ್ಬಾಳಲು ದಾಖಲೆ ಲಕ್ಷ್ಮಿಪುರ ಗ್ರಾಮದ ಶಿಳೇಕ್ಯಾತ ಸಮುದಾಯದ ಜನರಿಗೆ ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಸಿಗದೆ, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದು, ಕಂದಾಯ ಇಲಾಖೆಯ ಅನಾಸ್ಥೆ ವಿರುದ್ಧ ಗ್ರಾಮಸ್ಥರು ಪ್ರತಿಭಟಿಸಿದರು.

ಹೆಬ್ಬಾಳಲು ದಾಖಲೆ ಲಕ್ಷ್ಮೀಪುರ, ಮುದ್ದನಹಳ್ಳಿ, ತಾವರೆಕೆರೆ, ದ್ಯಾವಲಾಪುರ, ಜಂಬೂರು, ಅಕ್ಕನಹಳ್ಳಿ ಕ್ರಾಸ್ ಗ್ರಾಮಗಳಲ್ಲಿ ಬೆರಳೆಣಿಕೆ ಯಷ್ಟು ಕುಟುಂಬಗಳು ವಾಸಿಸುತ್ತಿದ್ದಾರೆ. ಆದರೆ 4 ವರ್ಷಗಳಿಂದ ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಸಿಗದೇ ಸಮುದಾಯದ ಮಕ್ಕಳಿಗೆ ಶೈಕ್ಷಣಿಕವಾಗಿ ತೊಂದರೆಯಾದೆ. ಸರ್ಕಾರದಿಂದ ಸವಲತ್ತು, ಉಚಿತ ಕೊಳವೆಬಾವಿ ಸಬ್ಸಿಡಿ ಸಾಲ ಸಿಗುತ್ತಿಲ್ಲ. ಉಪ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳ ಲೋಪದಿಂದ ಇವರಿಗೆ ಅನ್ಯಾಯವಾಗುತ್ತದೆ ಎಂದು ಕರ್ನಾಟಕ ರಾಜ ರೈತ ಸಂಘದ ತಾಲ್ಲೂಕು ಅಧ್ಯಕ್ಷ ರಾಮಚಂದ್ರು ಆರೋಪಿಸಿದರು.

2022 ರಿಂದ ಸ್ಥಗಿತ : 2021 -22ನೇ ಸಾಲಿನವರೆಗೂ ಶಿಳೇಕ್ಯಾತ ಸಮುದಾಯದವರಿಗೆ ಜಾತಿ ಮತ್ತು
ಆದಾಯ ದೃಢೀಕರಣ ಪತ್ರವನ್ನು ಕಂದಾಯ ಇಲಾಖೆ ನೀಡಿದೆ. ಮೂರು ವರ್ಷಗಳಿಂದ ಪ್ರಮಾಣ ಪತ್ರ ನೀಡುತ್ತಿಲ್ಲ. ಬಾಗೂರು ಹಿರೀಸಾವೆ ಕಸಬಾ ದಂಡಿಗನಹಳ್ಳಿ ಹೋಬಳಿಗಳಲ್ಲಿ ಈ ಸಮುದಾಯದವರಿಗೆ ಜಾತಿ ಮತ್ತು ಆದಾಯ ದೃಢೀಕರಣ ಪತ್ರವನ್ನು ನೀಡುತ್ತಿದ್ದು, ನುಗ್ಗೇಹಳ್ಳಿ ಹೋಬಳಿ ಮಾತ್ರ ಯಾಕೆ ನೀಡುತ್ತಿಲ್ಲ ಅಧಿಕಾರಿಗಳು ಯಾಕೆ ಅಸಡ್ಡೆ ತೋರುತ್ತಿದ್ದಾರೆ, ಕಂದಾಯ ಇಲಾಖೆಗೆ ಮನವಿ ನೀಡಿದ್ದರೂ ಸ್ಪಂದಿಸಿಲ್ಲ ಎಂದು ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದರು.


Share with

Leave a Reply

Your email address will not be published. Required fields are marked *