ಉಪ್ಪಳ : ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಆ.3 ವಿಶಿಷ್ಟ ವಾದ ಕರ್ಕಾಟಕ ಮಾಸದ ಔಷಧೀಯ ಗಂಜಿ ಕಾರ್ಯಕ್ರಮ ನಡೆಯಲಿದೆ. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನ ದಲ್ಲಿ ಮಠದ ಆರೋಗ್ಯ ಯೋಜನೆಯ ನಿತ್ಯಾನಂದ ಆಯುರ್ವೇದಿಕ್ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಕೇರಳದ ಪಾರಂಪರಿಕ ನಾಟಿ ವೈದ್ಯರುಗಳು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹಸಿರು ಪರಿಸರದ ಪ್ರತಿಯೊಂದು ಗಿಡ ಬಳ್ಳಿ ಎಲೆಗಳು ಹೊಂದಿರುವ ಔಷಧೀಯ ಗುಣಗಳ ಬಗ್ಗೆ ಕರ್ಕಾಟಕ ಮಾಸದಲ್ಲಿ ಬಳಕೆಯ ಮಹತ್ವದ ಬಗ್ಗೆ ಮತ್ತು ಔಷಧೀಯ ಗುಣಗಳ ಬಗ್ಗೆ ನಾಟಿವೈಧ್ಯರಾದ ಶ್ರೀ.ಟಿ.ಟಿ.ಅರವಿಂದಾಕ್ಷನ್ ಮತ್ತು ಪೈವಳಿಕೆ ಆರೋಗ್ಯಕೇಂದ್ರದ ಡಾ. ಗಣೇಶ್ ಕುಮಾರ್ ಮಾಹಿತಿ ನೀಡಲಿದ್ದಾರೆ .

ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ರಾಧಾಕೃಷ್ಣನ್ ಬಂದ್ಯೋಡು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಶ್ರೀ ರಾಜಮೋಹನ್ ಉಣ್ಣಿತ್ತಾನ್ ಸಂಸದರು ಕಾಸರಗೋಡು ಲೋಕಸಭಾ ಕ್ಷೇತ್ರ ,ಶ್ರೀ ವೇದವ್ಯಾಸ ಕಾಮತ್ ವಿಧಾನಸಭಾ ಸದಸ್ಯರು ಮಂಗಳೂರು ನಗರ ದಕ್ಷಿಣ, ಶ್ರೀ ಜಿತೇಂದ್ರ ಕೊಟ್ಟಾರಿ ಉದ್ಯಮಿಗಳು ಮಂಗಳೂರು, ಡಾ. ಸಂದೀಪ್ ಬೇಕಲ್ ಪ್ರಾಂಶುಪಾಲರು ಶಾರದಾ ಆಯುರ್ವೇದ ಕಾಲೇಜ್ ತಲಪಾಡಿ, ಶ್ರೀ ಜಯದೇವನ್ ಕಣ್ಣೂರ್ ಅಧ್ಯಕ್ಷರು ನಿತ್ಯಾನಂದ ಆಯುರ್ವೇದ ಸಂರಕ್ಷಣಾ ಸಮಿತಿ ಕೇರಳ, ಉಪಸ್ಥಿತರಿರುವರು . ಈ ಸಂದರ್ಭದಲ್ಲಿ ಡಾ.ಡಿ ರಮಾನಾಥನ್ ಎಂ. ಡಿ ಸೀತಾರಾಮ್ ಆಯುರ್ವೇದ ಸ್ಪೆಷಾಲಿಟಿ ಆಸ್ಪತ್ರೆ ತ್ರಿಶೂರ್ ಇವರು ಈ ವರ್ಷದ "ಆಯುಶ್ರೀ ೨೦೨೫" ಪ್ರಶಸ್ತಿಗೆ ಭಾಜನರಾಗಿರುತ್ತಾರೆ.
ನಮ್ಮ ಸುತ್ತಲಿನ ಗಿಡ ಬಳ್ಳಿ ಎಲೆಗಳಿಂದ ತಯಾರಿಸಿದ ವಿಶಿಷ್ಟ ಖಾದ್ಯಗಳ ಭೋಜನವೂ ಇರಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪರಿಸರದ ಅರಿವು ಮೂಡಿಸಿಕೊಳ್ಳಬೇಕೆಂದು ಶ್ರೀಮಠ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.




