ಬೆಂಗಳೂರು, ಅಕ್ಟೋಬರ್ 14: ಸುಮಾರು ದಿನಗಳ ಬಳಿಕ ಸಿಲಿಕಾನ್ ಸಿಟಿ (bangaluru) ಜನರಿಗೆ ಅದೊಂದು ಭಯ ಶುರುವಾಗಿದೆ. ಅದೇ ಚಿರತೆ (leopard) ಭಯ. ಸೋಮವಾರದಂದು ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಬಳಿಯ ಕೆಂಪೇಗೌಡ ಲೇಔಟ್ನಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಸ್ಥಳೀಯರ ಮೊಬೈಲ್ನಲ್ಲಿ ವಿಡಿಯೋ ಸೆರೆಯಾಗಿದೆ. ಜೊತೆಗೆ ಸಿಸಿಟಿವಿಯಲ್ಲೂ ಚಿರತೆ ಓಡಾಟ ಪತ್ತೆಯಾಗಿದೆ. ಸದ್ಯ ಸ್ಥಳೀಯರು ಆತಂಕಗೊಂಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಲೇಔಟ್ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿತ್ತು. ಚಿರತೆ ಓಡಾಟದ ಹಿನ್ನೆಲೆ ನಾಗರಿಕರು ಕಂಗೆಟ್ಟಿದ್ದಾರೆ. ಗೇರಿ ಹೋಬಳಿಯ ಹೊಸ ಪಾಳ್ಯ, ಬೆಟ್ಟನ ಪಾಳ್ಯ, ಹುಣಸೆ ಮರದ ಪಾಳ್ಯ, ಭೀಮನ ಕುಪ್ಪೆ ಮತ್ತು ಚಲ್ಲಘಟ್ಟ ಗ್ರಾಮಗಳ ಜನರಲ್ಲಿ ಆತಂಕ ಶುರುವಾಗಿದೆ.





