ತುಮಕೂರಿನ ಅಧಿಕಾರಿಗಳಿಗೆ ಸಾರ್ವಜನಿಕರಿಂದ ದೀಪಾವಳಿ ಗಿಫ್ಟ್! ಏನು ಗೊತ್ತಾ?

Share with

ತುಮಕೂರು, ಅಕ್ಟೋಬರ್ 14: ಇತ್ತೀಚಿಗೆ ಕಸದ (Garbage) ಸಮಸ್ಯೆ ದೊಡ್ಡ ತಲೆನೋವಾಗಿ ಬಿಟ್ಟಿದೆ. ಎಲ್ಲೆಂದರಲ್ಲಿ  ಕಸ ಕಾಣಸಿಗುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವಂತೆ ಆಗಿದೆ. ಅಧಿಕಾರಿಗಳು ಇದ್ದರೂ ಇಲ್ಲದಂತಾಗಿದ್ದು, ಸರಿಯಾಗಿ ಕಸ ವಿಲೇವಾರಿ ಆಗದೇ ಜನರು ಬೇಸತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಗೆ ಅಸಮಾಧಾನಗೊಂಡ ಸಾರ್ವಜನಿಕರು (public) ಅಧಿಕಾರಿಗಳೇ ಕಸವನ್ನು ಕೊರಿಯರ್ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ್ದಾರೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ ದೀಪಾವಳಿ ಹಬ್ಬದ ಮುನ್ನವೇ ಕಸದ ಸಮಸ್ಯೆ ಜೋರಾಗಿದೆ. ಇದರಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ನಗರದಲ್ಲಿನ ಅಸಮರ್ಪಕ ಕಸ ವಿಲೇವಾರಿ ವಿರುದ್ಧ ಸಾರ್ವಜನಿಕರ ಬೇಸತ್ತಿದ್ದಾರೆ. ಕೆಆರ್‌ಎಸ್ ಪಕ್ಷ ಹಾಗೂ ರೈತ ಸಂಘದ ಸದಸ್ಯರೊಂದಿಗೆ ಸೇರಿ ವಿಭಿನ್ನವಾಗಿ ಪ್ರತಿಭಟಿಸಿದರು. ಈ ಮೂಲಕ ಅಧಿಕಾರಿಗಳಿಗೆ ಕಸವನ್ನು ದೀಪಾವಳಿ ಉಡುಗೊರೆಯಾಗಿ ಕಳುಹಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.


Share with

Leave a Reply

Your email address will not be published. Required fields are marked *