ಪುತ್ತೂರಿನಿಂದ ಬೆಂಗಳೂರಿಗೆ ಹಗಲು ಬಸ್ ಸೇವೆಗೆ ಶಾಸಕರಿಂದ ಚಾಲನೆ

Share with

ಪುತ್ತೂರಿನಿಂದ ಬೆಂಗಳೂರಿಗೆ ಮತ್ತು ಪುತ್ತೂರು ಮೊಟ್ಟೆತ್ತಡ್ಕ- ಪಂಜಳ -ನರಿಮೊಗರು ಮಾರ್ಗವಾಗಿ ಹೊಸ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಶಾಸಕ ಅಶೋಕ್ ರೈ ಚಾಲನೆ ನೀಡಿದರು.

ಬೆಂಗಳೂರಿಗೆ ಪುತ್ತೂರಿನಿಂದ ಬೆಳಗ್ಗೆ 8 ಗಂಟೆಗೆ ಈ ಅಶ್ವಮೇಧ ಬಸ್ ಹೊರಡಲಿದೆ. ಬೆಳಗ್ಗೆ ಪುತ್ತೂರಿನಿಂದ ಬೆಂಗಳೂರಿಗೆ ಬಸ್ ಸಂಚಾರ ಇರಲಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ರೈ ಸೂಚನೆಯಂತೆ ಇಲಾಖೆಯಿಂದ ಹೊಸ ಬಸ್ ಮಂಜೂರಾಗಿದೆ.

ಅದೇ ರೀತಿ ಪುತ್ತೂರಿನಿಂದ ಮೊಟ್ಟೆತ್ತಡ್ಕ ಮಾರ್ಗವಾಗಿ- ಪಂಜಳದಿಂದ ಪುರುಷರಕಟ್ಟೆಯಾಗಿ ಪುತ್ತೂರಿಗೆ ಸಂಪರ್ಕ ಕಲ್ಪಿಸುವ ಹೊಸ ಬಸ್ ಸಂಚಾರಕ್ಕೆ ಸಹ ಶಾಸಕರು ಚಾಲನೆ ನೀಡಿದರು.

ಪುತ್ತೂರಿನಿಂದ ಬೆಂಗಳೂರಿಗೆ ಬೆಳಗ್ಗೆ ವೇಳೆ ಬಸ್ ಸಂಚಾರ ಬಿಡಬೇಕು ಎಂಬ ಸಾರ್ವಜನಿಕರ ಬೇಡಿಕೆ ಈಡೇರಿದಂತಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.


Share with

Leave a Reply

Your email address will not be published. Required fields are marked *