ಕೆ.ಎಲ್.ರಾಹುಲ್ ಕರ್ನಾಟಕ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ವಿಜಯ್ ಹಜಾರೆ ಟೂರ್ನಿಗೆ ಕರ್ನಾಟಕ ತಂಡ ಪ್ರಕಟವಾಗಿದ್ದು, ಕೆ.ಎಲ್ ರಾಹುಲ್ ಸ್ಥಾನ ಪಡೆದುಕೊಂಡಿದ್ದಾರೆ.

6 ವರ್ಷಗಳ ಬಳಿಕ ವಿಜಯ್ ಹಜಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲು ಕೆ.ಎಲ್ ರಾಹುಲ್ ಸಜ್ಜಾಗಿದ್ದಾರೆ. 2019-20ರ ಟೂರ್ನಿಯಲ್ಲಿ ಕೊನೆಯ ಬಾರಿ ರಾಹುಲ್ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡಿದ್ದರು. ಮಯಾಂಕ್ ಅಗರ್ವಾಲ್ ನಾಯಕನಾಗಿ ಮುಂದುವರೆದಿದ್ದು, ಕರುಣ್ ನಾಯರ್ಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ. ತಂಡದಲ್ಲಿ ಕೆ.ಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ ಸೇರಿದಂತೆ ಒಟ್ಟು 16 ಆಟಗಾರರಿಗೆ ಸ್ಥಾನ ಕಲ್ಪಿಸಲಾಗಿದೆ. ದೇವದತ್ ಪಡಿಕ್ಕಲ್, ವೈಶಾಕ್ ವಿಜಯ್ಕುಮಾರ್, ಅಭಿನವ್ ಮನೋಹರ್ ಸ್ಥಾನ ಪಡೆದ ಪ್ರಮುಖ ಆಟಗಾರರಾಗಿದ್ದಾರೆ.
ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ಕ್ಯಾಪ್ಟನ್), ದೇವದತ್ ಪಡಿಕ್ಲ್, ಕರುಣ್ ನಾಯರ್ (ಉಪನಾಯಕ), ಆರ್.ಸ್ಮರಣ್, ಕೆಎಲ್ ಶ್ರೀಜಿತ್, ಅಭಿನವ್ ಮನೋಹರ, ಶ್ರೇಯಸ್ ಗೋಪಾಲ್, ವೈಶಾಕ್ ವಿಜಯ್, ಮನ್ವಂತ್ ಕುಮಾರ್, ಶ್ರೀಶಾ ಎಸ್ ಆಚಾರ್, ಅಭಿಲಾಷ್ ಶೆಟ್ಟಿ, ಶರತ್ ಬಿಆರ್, ಹರ್ಷಿಲ್ ಧರ್ಮಣಿ, ಧ್ರುವ್ ಪ್ರಭಾಕರ್, ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ




