ವಿಚ್ಛೇದನ ನೋಟಿಸ್ ಕೊಟ್ಟ ಪತ್ನಿಯನ್ನು ನಡು ರಸ್ತೆಯಲ್ಲಿ ಶೂಟ್ ಮಾಡಿ ಕೊಂದ ಪತಿ..!

Share with

ವಿಚ್ಛೇದನ ನೋಟಿಸ್ ಕೊಟ್ಟಿದ್ದ ಪತ್ನಿಯನ್ನು ನಡು ರಸ್ತೆಯಲ್ಲೇ ಶೂಟ್ ಮಾಡಿ ಕೊಂಡ ಘಟನೆ ಬೆಂಗಳೂರಿನ ಮಾಗಡಿ ರಸ್ತೆ ಬಳಿ ಘಟನೆ ನಡೆದಿದೆ. 39 ವರ್ಷದ ಭುವನೇಶ್ವರಿ ಮೃತಪಟ್ಟವರು. ಪತಿ 40 ವರ್ಷದ ಬಾಲಮುರುಗನ್ ಕೊಲೆ ಆರೋಪಿಯಾಗಿದ್ದಾನೆ.

ಭುವನೇಶ್ವರಿ ಸ್ಥಳೀಯ ಬ್ಯಾಂಕ್ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಭುವನೇಶ್ವರಿ ಮತ್ತು ಬಾಲಮುರುಗನ್ ನಡುವೆ ಎರಡು ವರ್ಷಗಳಿಂದ ಮನಸ್ತಾಪವಿತ್ತು. ಹೀಗಾಗಿ ಭುವನೇಶ್ವರಿ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇತ್ತೀಚೆಗೆ ವಿಚ್ಛೇದನ ನೋಟಿಸ್ ನೀಡಿದ್ದರು ಎಂದು ವರದಿಯಾಗಿದೆ.

ಇದರಿಂದ ಪತಿ ಬಾಲಮುರುಗನ್ ಸಿಟ್ಟಿಗೆದ್ದಿದ್ದ. ಇದೇ ಕಾರಣಕ್ಕೆ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ. ನಿನ್ನೆ ಸಂಜೆ 6.30 ರಿಂದ 7.30 ರೊಳಗೆ ಬ್ಯಾಂಕ್ ಕೆಲಸ ಮುಗಿಸಿ ಭುವನೇಶ್ವರಿ ಹೊರಗೆ ಬರುವುದನ್ನೇ ಆರೋಪಿ ಬಾಲಮುರುಗನ್ ಕಾಯುತ್ತಿದ್ದ.

ಆಕೆ ಹೊರಗೆ ಬರುತ್ತಿದ್ದಂತೇ ಗುಂಡು ಹಾರಿಸಿ ನಡು ರಸ್ತೆಯಲ್ಲೇ ಕೊಲೆ ಮಾಡಿದ್ದಾನೆ. ಆರೋಪಿ ನಾಲ್ಕು ವರ್ಷಗಳ ಹಿಂದೆ ಐಟಿ ಕಂಪನಿ ಉದ್ಯೋಗಿಯಾಗಿದ್ದ. ಆದರೆ ಈಗ ಕೆಲವು ವರ್ಷಗಳಿಂದ ನಿರುದ್ಯೋಗಿಯಾಗಿದ್ದ. ಈತನಿಗೆ ಈಗ ಪಿಸ್ತೂಲ್ ಹೇಗೆ ಸಿಕ್ತು ಎಂಬ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕೃತ್ಯ ನಡೆಸಿದ ಬಳಿಕ ತಾನೇ ಖುದ್ದಾಗಿ ಪೊಲೀಸ್ ಠಾಣೆಗೆ ತೆರಳಿ ಈತ ಶರಣಾಗಿದ್ದಾನೆ.


Share with

Leave a Reply

Your email address will not be published. Required fields are marked *