ಬಿಗ್ ಬಾಸ್–12: ಫಿನಾಲೆಯ ಅಂತಿಮ ಕ್ಷಣದಲ್ಲಿ ಮಹಿಳಾ ಸ್ಪರ್ಧಿ ಔಟ್..!

Share with

ಬಿಗ್ ಬಾಸ್ ಸೀಸನ್12 ರ ಗ್ರಾಂಡ್ ಫಿನಾಲೆ ಆರಂಭವಾಗಿದೆ. ಕಿಚ್ಚ ಸುದೀಪ್ ತಮ್ಮ ಸಿನಿಮಾದ ಹಾಡಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ.

ಈ ಸೀಸನ್‌ನಲ್ಲಿ ಕಾಣಿಸಿಕೊಂಡ ಸ್ಪರ್ಧಿಗಳ ಜತೆ ಸುದೀಪ್ ತಮಾಷೆಯಿಂದ ಮಾತನಾಡಿದ್ದಾರೆ. ಡಾಗ್ ಸತೀಶ್, ರಿಷಾ, ಅವರ ಕಾಲೆಳೆದು ಮಾತನಾಡಿದ್ದಾರೆ.

ಕರಿಬಸಪ್ಪ, ಅಮಿತ್, ಅಭಿಷೇಕ್, ಸ್ಪಂದನ, ಕಾಕ್ರೋಷ್ ಸುಧಿ, ಸೂರಜ್ ಸೇರಿದಂತೆ ಹಲವರ ಜತೆ ಸುದೀಪ್ ಮಾತನಾಡಿದ್ದಾರೆ. ಅವರ ಜತೆ ಬಿಗ್ ಬಾಸ್ ಜರ್ನಿಯ ಬಗ್ಗೆ ಕೇಳಿದ್ದಾರೆ.

ಟಾಪ್ 6 ಸ್ಪರ್ಧಿಗಳಲ್ಲಿ ನೆಚ್ಚಿನ ಸ್ಪರ್ಧಿ ಯಾರು ಎನ್ನುವುದನ್ನು ಸ್ಪರ್ಧಿಗಳಲ್ಲಿ ಕೇಳಲಾಗಿದೆ. ಇದಕ್ಕೆ ಕೆಲವರು ಅಶ್ವಿನಿ, ರಘು, ಗಿಲ್ಲಿ, ರಕ್ಷಿತಾ ಅವರ ಹೆಸರನ್ನು ಹೇಳಿದ್ದಾರೆ.

ಇನ್ನು ಫಿನಾಲೆ ಸ್ಪರ್ಧಿಗಳ ಪೈಕಿ ಕಾವ್ಯ ಅವರು ಸುಂದರವಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರಕ್ಷಿತಾ, ಗಿಲ್ಲಿ, ಅಶ್ವಿನಿ ಅವರು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಫಿನಾಲೆಯಲ್ಲಿರುವ ಸ್ಪರ್ಧಿಗಳ ಪೈಕಿ ಕೆಲ ಸ್ಪರ್ಧಿಗಳು ಟ್ರೋಫಿ ಗೆಲ್ಲುವ ಸ್ಥಾನದಿಂದ ಹೊರಬಿದ್ದಿದ್ದಾರೆ. ಪ್ರಬಲ ಸ್ಪರ್ಧಿಗಳೇ ಮನೆಯಿಂದ ಔಟಾಗಿದ್ದಾರೆ ಎನ್ನಲಾಗುತ್ತಿದೆ.

ಇಬ್ಬರು ಪ್ರಬಲ ಸ್ಪರ್ಧಿಗಳು ಟ್ರೋಫಿ ಗೆಲ್ಲುವ ಸಮೀಪಕ್ಕೆ ಬಂದು ಎಲಿಮಿನೇಟ್ ಆಗಿದ್ದಾರೆ.

ಧನುಷ್ ಅವರು 6ನೇ ಸ್ಥಾನದೊಂದಿಗೆ ಬಿಗ್ ಬಾಸ್ ಪಯಣ ಮುಗಿಸಿದ್ದಾರೆ ಎನ್ನಲಾಗಿದೆ. ಇದರ ಜತೆ ರಘು ಅವರು 5ನೇ ರನ್ನರ್ ಅಪ್ ಆಗಿ ಆಟ ಮುಗಿಸಿದ್ದಾರೆ ಎನ್ನಲಾಗಿದೆ.

ಇದೀಗ ಇದರ ಜತೆ ಮತ್ತೊಬ್ಬ ಸ್ಪರ್ಧಿ ಮನೆಯಿಂದ ಹೊರಬಿದ್ದಿದ್ದಾರೆ ಎನ್ನಲಾಗುತ್ತಿದೆ. ವೀಕ್ಷಕರ ಮೆಚ್ಚಿನ ಸ್ಪರ್ಧಿಯಲ್ಲಿ ಒಬ್ಬರಾಗಿದ್ದ ಕಾವ್ಯ ಶೈವ (Kavya Shaiva) ಅವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ.

ಅವರು ಮೂರನೇ ರನ್ನರ್ ಅಪ್ ಆಗಿ ಪಯಣ ಮುಗಿಸಿದ್ದಾರೆ ಎನ್ನಲಾಗಿದೆ.


Share with

Leave a Reply

Your email address will not be published. Required fields are marked *