IPL ಪಂದ್ಯಗಳ ಟಿಕೆಟ್ ಹಂಚಿಕೆ & ಮಾರಾಟದ ಬಗ್ಗೆ ಶಾಸಕ ಗಣಿಗ ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ IPL ಪಂದ್ಯಗಳು ನಡೆಯುತ್ತಿರುವುದು ಸಂತೋಷದ ವಿಚಾರವಾದರೂ, ಸಾಮಾನ್ಯರಿಗೆ ಟಿಕೆಟ್ ಸಿಗದ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದ್ದಾರೆ.
KSCA ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಅವರು, ಮೂಲ ದರಕ್ಕಿಂತ ಹತ್ತು ಪಟ್ಟು ಹೆಚ್ಚು ದರಕ್ಕೆ IPL ಟಿಕೆಟ್ಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇದನ್ನು ‘ಟಿಕೆಟ್ ಗ್ಯಾಂಬ್ಲಿಂಗ್’ ಎಂದು ಅವರು ಕಿಡಿಕಾರಿದ್ದಾರೆ.




