ಕಾಸರಗೋಡು: ಜೂನ್ 15 ರಿಂದ ಕೇರಳಂ ರಾಜ್ಯದಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಯೋಜನೆ ಜಾರಿ- ಕೇರಳಂ ರಾಜ್ಯದ ನೂತನ ಸಿ.ಎಂ ವಿ.ಡಿ ಸತೀಶನ್ ಘೋಷಣೆ ಮಾಡಿದ್ದಾರೆ.

ಕೇರಳದ ನೂತನ ಯುಡಿಎಫ್ ಸರಕಾರ ಇಂದಿರಾ ಗ್ಯಾರಂಟಿಗಳನ್ನು ಜಾರಿಗೆ ತರಲು ನಡೆಸಿದ ಮೊದಲ ಸಚಿವ ಸಂಪುಟ ಸಭೆಯಲ್ಲಿ, ಜೂನ್ 15ರಿಂದ Kerala State Road Transport Corporation ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಮೋದನೆ ನೀಡಿದೆ. ಹಿರಿಯ ನಾಗರಿಕರಿಗಾಗಿ ಹೊಸ ಇಲಾಖೆಯನ್ನು ಸ್ಥಾಪಿಸಲಾಗುತ್ತದೆ ಹಾಗೂ ಆಶಾ ಕಾರ್ಯಕರ್ತೆಯರ ಭತ್ಯೆಯನ್ನು ₹3000 ಹೆಚ್ಚಿಸಲಾಗುವುದು ಎಂದು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.




