ಆರ್ಯ (ರಿ.) 5ನೇ ವರ್ಷದ ಸಂಭ್ರಮಾಚರಣೆ

Share with

ದಿನಾಂಕ 14/6/2026: ಸಮಾಜ ಸೇವೆ, ಶಿಕ್ಷಣ, ಕಲೆ, ಉದ್ಯೋಗ ಸೃಷ್ಟಿ ಹಾಗೂ ತುರ್ತು ನೆರವಿನಂತಹ ವಿವಿಧ ಸಮಾಜಮುಖಿ ಕಾರ್ಯಗಳ ಮೂಲಕ ಜನಮನ ಗೆದ್ದಿರುವ ಆರ್ಯ (ರಿ)5ನೇ ವರ್ಷದ ಸಂಭ್ರಮಾಚರಣೆಯನ್ನು ತನ್ನ ಅಂಗ ಸಂಸ್ಥೆ ಯಾದ ಆರ್ಯ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಅದ್ಧೂರಿಯಾಗಿ ಆಚರಿಸಲಾಯಿತು

ಈ ವಿಶೇಷ ಕಾರ್ಯಕ್ರಮದಲ್ಲಿ ಜನಪ್ರಿಯ ಹಾಸ್ಯ ಕಾರ್ಯಕ್ರಮ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಹಾಗೂ ಕಾಮಿಡಿ ಕಿಲಾಡಿಗಳು ರನ್ನರ್-ಅಪ್ ಪ್ರಶಸ್ತಿ ಪುರಸ್ಕೃತರಾದ ದೀಕ್ಷಾ ಬ್ರಹ್ಮಾವರ, ಸಮಾಜ ಸೇವಕ ಹಾಗೂ ಉದ್ಯಮಿ ರಾಜೇಶ್ ಪೂಜಾರಿ, ವಾತ್ಸಲ್ಯ ಉಡುಪಿ ಸಂಸ್ಥೆಯ ರೂವಾರಿ ಪ್ರಸನ್ನ ಪಚ್ಚಿ ಮಣಿಪಾಲ, ಸಂಗಮ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷೆ ಹಾಗೂ ರಾಮಕ್ಷತ್ರಿಯ ಮಹಿಳಾ ಮಂಡಳಿ ಕೋಶಾಧಿಕಾರಿ ಜ್ಯೋತಿ ಕೃಷ್ಣಮೂರ್ತಿ, ಡಾಕ್ಟರ್ ಫೌಂಡೇಶನ್ ಸಂಸ್ಥಾಪಕ ಶಶಿಕಿರಣ್ ಡಾಕ್ಟರ್, ಆರ್ಯ ಸಂಸ್ಥೆಯ ಸಂಸ್ಥಾಪಕರಾದ ಮಂಜುನಾಥ್ ಚೇರ್ಕಾಡಿ ಹಾಗೂ ಮೇಘ ಮತ್ತು ತಂಡದ ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಗಣ್ಯರಾದ. ದೀಕ್ಷಾ ಬ್ರಹ್ಮಾವರ, ರಾಜೇಶ್ ಪೂಜಾರಿ, ಪ್ರಸನ್ನ ಪಚ್ಚಿ ಮಣಿಪಾಲ, ಶಶಿಕಿರಣ್ ಡಾಕ್ಟರ್ ಹಾಗೂ ಆರ್ಯ ತಂಡಕ್ಕೆ ನಿರಂತರ ಬೆಂಬಲ ನೀಡುತ್ತಿರುವ ಸುರೇಶ್-ಆಶಾಲತಾ ದಂಪತಿ ಅವರನ್ನು ವಿಶೇಷವಾಗಿ ಸನ್ಮಾನಿಸ ಲಾಯಿತು

ಈ ಸಂಭ್ರಮಾಚರಣೆಯಲ್ಲಿ ತಂಡದ ಸಕ್ರಿಯ ಸದಸ್ಯರಾದ ಸೋನಿ ಪ್ರಭುದನ್, ಕೃತಿ ಮೂಡಬೆಟ್ಟು, ಸೃಜನ್ ಕಿರಿ ಮಂಜೇಶ್ವರ, ಮೇಘನ ಕಿರಿ ಮಂಜೇಶ್ವರ, ರಕ್ಷಿತ್ ಸರಿಪಳ್ಳ, ಶ್ರೇಯಸ್, ವಿನೀತ್ ಆಚಾರ್ಯ ಹಾಗೂ ವಿಶಾಲ್ ಆಚಾರ್ಯ ಉಪಸ್ಥಿತರಿದ್ದರು

ಸಮಾಜ ಸೇವೆಯ ಪಥದಲ್ಲಿ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಆರ್ಯ ಸಂಸ್ಥೆ(ರಿ) ತನ್ನ ಅಂಗ ಸಂಸ್ಥೆ ಆರ್ಯ ಚಾರಿಟೇಬಲ್ ಟ್ರಸ್ಟ್, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಜನಪರ ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಸೇವಾ ಯಜ್ಞವನ್ನು ಮುಂದುವರಿಸುವ ಸಂಕಲ್ಪ ಹೊಂದಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *