ಚೆನ್ನೈ: ತಮಿಳುನಾಡು ಸರ್ಕಾರವು ಇನ್ನು ಮುಂದೆ ಕೇವಲ ಹವಾನಿಯಂತ್ರಿತ(ಎಸಿ) ಬಸ್‌ಗಳನ್ನು ಮಾತ್ರ ಖರೀದಿಸಲಿದೆ ಎಂದು ರಾಜ್ಯ ಸಾರಿಗೆ ಸಚಿವ ವಿಜಯ್ ತಮಿಳನ್ ಪಾರ್ಥಿಬನ್ ಭಾನುವಾರ ತಿಳಿಸಿದ್ದಾರೆ.

ಸಾರ್ವಜನಿಕರು ಆರಾಮದಾಯಕವಾಗಿ ಸರ್ಕಾರಿ ಬಸ್ಸುಗಳಲ್ಲಿ ಹೆಚ್ಚಾಗಿ ಪ್ರಯಾಣಿಸಬೇಕು ಎಂಬುದು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಆಶಯವಾಗಿದೆ ಎಂದು ಪಾರ್ಥಿಬನ್ ತಿಳಿಸಿದ್ದಾರೆ.
ಸೇಲಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ರಾಜ್ಯದ ಪ್ರತಿ ಮೂಲೆಗೂ ಬಸ್ ಸಂಪರ್ಕ ದೊರೆಯಬೇಕು. ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಲು ಅವಶ್ಯಕವಿರುವ ಎಲ್ಲಾ ಸೌಲಭ್ಯಗಳೂ ಬಸ್‌ಗಳಲ್ಲಿ ಲಭ್ಯವಿರಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದರು. ಕಳೆದ ವಾರವಷ್ಟೇ 300 ಹೊಸ ಸರ್ಕಾರಿ ಬಸ್‌ಗಳ ಸಂಚಾರಕ್ಕೆ ವಿಜಯ್ ಹಸಿರು ನಿಶಾನೆ ತೋರಿದ್ದರು.




