ಜಗಳ ಬಿಡಿಸಲು ಬಂದ ಪೊಲೀಸರಿಗೇ ಚಾಕು ಇರಿತ..!!

Share with

ರೌಡಿಗಳ ನಡುವಿನ ಗಲಾಟೆ ಬಿಡಿಸಲು ತೆರಳಿದ್ದ ಕರ್ತವ್ಯನಿರತ ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಸಂಭವಿಸಿದೆ.

ರೌಡಿಶೀಟ‌ರ್ ಹಾಗೂ ಆತನ ಗ್ಯಾಂಗ್‌ ನಡೆಸಿದ ಚಾಕು ಇರಿತದಿಂದ ಇಬ್ಬರು ಪೊಲೀಸ್‌ ಸಿಬ್ಬಂದಿ ಮತ್ತು ಒಬ್ಬ ಸ್ಥಳೀಯ ಯುವಕ ತೀವ್ರವಾಗಿ ಗಾಯಗೊಂಡಿದ್ದಾರೆ. ಸದ್ಯ ಘಟನೆ ಸಂಬಂಧ ಪೊಲೀಸರು ಪ್ರಮುಖ ಆರೋಪಿ ರೌಡಿಶೀಟರ್ ರಾಜು ಹಾಗೂ ಮನೋಜ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *