ಕೊಡಗು ಜಿಲ್ಲೆಯ ವಿರಾಜಪೇಟೆ ಹೊರವಲಯದ ಐಮಂಗಲ ಗ್ರಾಮದಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ. ಸುಮಾರು 650 ವರ್ಷಗಳ ಹಿಂದಿನ ಮಹದೇವ ದೇವಾಲಯ ಇಲ್ಲಿ ಇತ್ತು ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಮೂಡಿದ್ದು, ಕಾಡುಪಾಲಾಗಿದ್ದ ದೇವಾಲಯವನ್ನು ಪುನರುಜ್ಜಿವನಗೊಳಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.
ಐಮಂಗಲ ಗ್ರಾಮದಿಂದ ಚೆಂಬೆಬೆಳ್ಳೂರು ರಸ್ತೆಯಲ್ಲಿ ಸುಮಾರು 3KM ದೂರದಲ್ಲಿರುವ ಕಾಡಿನ ಪ್ರದೇಶದಲ್ಲಿ ಶಿವಲಿಂಗ, ಬಸವ ಮೂರ್ತಿ, ಗರ್ಭಗುಡಿಯ ಕುರುಹು, ತೀರ್ಥಕುಂಡ ಸೇರಿದಂತೆ ಹಲವು ಅವಶೇಷಗಳು ಪತ್ತೆಯಾಗಿವೆ.




