ದೇಶದ ಮೊದಲ ದ್ರವೀಕೃತ ನೈಸರ್ಗಿಕ ಅನಿಲ ಚಾಲಿತ ರೈಲಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಅಹಮದಾಬಾದ್‌ನ ಸಬರಮತಿ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು. ಇದರೊಂದಿಗೆ ₹1,542 ಕೋಟಿಗಳಿಗೂ ಹೆಚ್ಚು ವೆಚ್ಚದ ವಿವಿಧ ರೈಲ್ವೆ ಯೋಜನೆಗಳಿಗೂ ಚಾಲನೆ ನೀಡಿದರು.
ಈ ಪೈಕಿ, ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಮತ್ತು ವ್ಯಾಗ್-12 ಲೋಕೋಮೋಟಿವ್ ನಿರ್ವಹಣಾ ಶೆಡ್ ಸೇರಿವೆ. ಸಬರಮತಿ-ಸರ್ಖೇಜ್ ರೈಲು ಮಾರ್ಗವನ್ನು ದ್ವಿಪಥಗೊಳಿಸುವ (ಡಬ್ಲಿಂಗ್) ಕಾಮಗಾರಿಗೆ ಅಡಿಪಾಯ ಹಾಕಲಾಯಿತು.




