ಜೋಡುಕಲ್ಲು : ಅಷ್ಟಮಿ ಹಾಗೂ ಚೌತಿ ಹಬ್ಬದ ಅಂಗವಾಗಿ ಭಕ್ತಾಧಿಗಳು ಹಾಗೂ ಪುಟಾಣಿ ಮಕ್ಕಳು ವಿಶ್ರಾಂತಿ ಪಡೆಯಲು ಜೋಡುಕಲ್ಲಿನಲ್ಲಿ ನಿರ್ಮಿಸಲಾಗಿದ್ದ ಪೆಂಡಾಲ್‌ನ್ನು ವಿರೋಧಿಸಿ ಮುಸ್ಲಿಂ ಲೀಗ್ ವತಿಯಿಂದ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಜೋಡುಕಲ್ಲು, ಕಯ್ಯಾರು ವ್ಯಾಪ್ತಿಯಲ್ಲಿ ಸೇವಾ ಭಾರತಿ (ರಿ.), ಜೋಡುಕಲ್ಲು ಇದರ ಆಶ್ರಯದಲ್ಲಿ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಹಬ್ಬದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ಪೆಂಡಾಲ್ ಹಾಕಲಾಗಿತ್ತು ಎಂದು ಆಯೋಜಕರು ತಿಳಿಸಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದ ಹಿಂದೂ ಬಾಂಧವರು ಹಾಗೂ ಮುಸ್ಲಿಂ ಲೀಗ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ಕೆಲಕಾಲ ಉದ್ವಿಗ್ನಗೊಂಡಿತು ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಲೋಕೇಶ್ ನೊಂಡಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.





