ಸುಳ್ಯ: ಇಲ್ಲಿನ ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಆಯತಪ್ಪಿ ವ್ಯಕ್ತಿಯೋರ್ವರು ಹೊಳೆಗೆ ಬಿದ್ದ ದುರ್ಘಟನೆ ಜು.6 ರಂದು ನಡೆದಿದ್ದು, ವ್ಯಕ್ತಿಯ ಮೃತದೇಹ ಮೂರು ದಿನಗಳ ಬಳಿಕ ಜು.9 ರಂದು ಪತ್ತೆಯಾಗಿದೆ.
ನಾಪತ್ತೆಯಾದ ಮೂರು ದಿವಸದಿಂದ ಕಾರ್ಯಾಚರಣೆ ಮಾಡುತ್ತಿದ್ದರೂ ಮೃತದೇಹ ಪತ್ತೆಯಾಗಿರಲಿಲ್ಲ. ಇದೀಗ ಕಾರ್ಯಾಚರಣೆ ಬಳಿಕ ಪೆರಾಜೆಯ ನೆಡ್ಚಿಲ್ ಸಮೀಪದ ಕಣಿ ಎಂಬಲ್ಲಿ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ದಳ, ಎಸ್‌ಡಿಆಎರ್ ಎಫ್ ತಂಡ, ಅಗ್ನಿಶಾಮಕ ದಳ ಸುಳ್ಯ, ಸುಳ್ಯ ಪೊಲೀಸ್ ಠಾಣಾ ಸಿಬ್ಬಂದಿ, ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಕಲ್ಲುಗುಂಡಿ ವಿಖಾಯ ತಂಡ, ಕಂದಾಯ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯತ್ ಸಿಬ್ಬಂದಿ, ಸುಳ್ಯ-ಪೆರಾಜೆಯ ಮುಳುಗು ತಜ್ಞರಿಂದ ಕಾರ್ಯಾಚರಣೆ ನಡೆಸಿದ್ದಾರೆ.
ಆಯತಪ್ಪಿ ಬಿದ್ದು ಹೊಳೆಯಲ್ಲಿ ಕೊಚ್ಚಿ ಹೋದ ವ್ಯಕ್ತಿ (veekshakavani.com)